ಬಿಗ್‌ಬಾಸ್‌ಗೆ ಬರ್ತಾರಂತೆ ಫರಾಖಾನ್!

ಜನಪ್ರಿಯ ಟಿವಿ ರಿಯಾಲಿಟಿ ಷೋ 'ಬಿಗ್‌ಬಾಸ್-8' ಕಾರ್ಯಕ್ರಮವನ್ನು...
ಬಿಗ್‌ಬಾಸ್-8
ಬಿಗ್‌ಬಾಸ್-8
Updated on

ನವದೆಹಲಿ: ಜನಪ್ರಿಯ ಟಿವಿ ರಿಯಾಲಿಟಿ ಷೋ 'ಬಿಗ್‌ಬಾಸ್-8' ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸ್ಥಾನಕ್ಕೆ ಇನ್ನು ಕೆಲವೇ ದಿನಗಳಲ್ಲಿ ಫರಾಖಾನ್ ಬರಲಿದ್ದಾರೆ.

ಬಿಗ್‌ಬಾಸ್-8ರ ಸರಣಿ ಅತೀ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗ್‌ಬಾಸ್-8 ಇನ್ನು ಒಂದು ತಿಂಗಳು ಮುಂದುವರೆಸಲು ಕಾರ್ಯಕ್ರಮದ ಆಯೋಜಕರು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ 5 ಮಂದಿ ಸ್ಟಾರ್‌ಗಳನ್ನು ಬಿಗ್‌ಬಾಸ್ ಮನೆಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಬಿಗ್‌ಬಾಸ್-8ರ ಸರಣಿ ಜನವರಿ 4ಕ್ಕೆ ಮುಗಿಯಬೇಕಿತ್ತು. ಆದರೆ, ಕಾರ್ಯಕ್ರಮದ ಆಯೋಜಕರು ಇನ್ನು 1 ತಿಂಗಳು ಮುಂದುವರೆಸುವ ತೀರ್ಮಾನ ಕೈ ಗೊಂಡಿದ್ದರಿಂದಾಗಿ ಸಲ್ಮಾನ್ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ಚಿತ್ರೀಕರಣಕ್ಕೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಕಾರ್ಯಕ್ರಮ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜನವರಿ 3ರಂದು ಬಿಗ್‌ಬಾಸ್-8ರ 'ಬಿಗ್‌ಬಾಸ್ ಹಲ್ಲಾ ಬೋಲ್‌' ಎಂಬ ವಿಶೇಷ ಸರಣಿ ಆರಂಭವಾಗಲಿದೆ. ಅಂದು ಸ್ವತಃ ಸಲ್ಮಾನ್ ಖಾನ್ ಅವರೇ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವ ಐವರು ಸ್ಟಾರ್‌ಗಳಾದ ರಾಹುಲ್ ಮಹಾಜನ್, ಸಂಭಾವ್ನ ಸೇತ್, ಎಜಾಜ್ ಖಾನ್, ಮಹೆಕ್ ಚಹಲ್ ಮತ್ತು ಈ ಹಿಂದಿನ ಬಿಗ್‌ಬಾಸ್ ಸೀಸನಲ್ಲೇ ಭಾಗವಹಿಸಿದ್ದ ಮತ್ತೊರ್ವ ಸ್ಪರ್ಧಿಯನ್ನು ಬಿಗ್‌ಬಾಸ್ ಮನೆಗೆ ಪರಿಚಯಿಸಲಿದ್ದಾರೆ.

ಬಿಗ್‌ಬಾಸ್ ನೋಡಲು ತುಂಬಾ ಇಷ್ಟ. ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಪ್ರತಿಯೊಂದು ಕ್ಷಣವನ್ನು ನೋಡಿ ಖುಷಿಪಡುತ್ತಿರುತ್ತೇನೆ. ಸಲ್ಮಾನ್ ವಾರಾಂತ್ಯದ ದಿನಗಳಲ್ಲಿ ಜನರಿಗೆ ಸಾಕಷ್ಟು ಮನರಂಜನೆ ನೀಡುತ್ತಿದ್ದರು. ನಾನೂ ಕೂಡ ಅದೇ ರೀತಿ ಮನರಂಜನೆ ಕೊಡಲು ಪ್ರಯತ್ನ ನಡೆಸುತ್ತಿದ್ದೇನೆ. ಈ ಪ್ರಯತ್ನದಿಂದ ಜನರು ಸಂತೋಷ ಪಡುತ್ತಾರೆ ಎಂದು ಆಶಿಸಿದ್ದೇನೆ ಎಂದು ಫರಾಖಾನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com