ಕರೀನಾ ಕೇಶಕ್ಕೆ ಕತ್ರೀನಾ?

ಸೈಜ್ ಜೀರೋ ಆಗೋಕೆ ಹಿಂದುಮುಂದು ನೋಡದ ಕರೀನಾ ತಲೆಕೂದಲ ವಿಷಯದಲ್ಲಿ ಮಾತ್ರ ವಿಪರೀತ ಪೊಸೆಸಿವ್ ...
ಕರೀನಾ  ಕಪೂರ್
ಕರೀನಾ ಕಪೂರ್
Updated on

ಸೈಜ್ ಜೀರೋ ಆಗೋಕೆ ಹಿಂದುಮುಂದು ನೋಡದ ಕರೀನಾ ತಲೆಕೂದಲ ವಿಷಯದಲ್ಲಿ ಮಾತ್ರ ವಿಪರೀತ ಪೊಸೆಸಿವ್ ಅಂತೆ. ಆಕೆ ಹೊಸ ಚಿತ್ರವೊಂದಕ್ಕಾಗಿ ಬಾಯ್ ಕಟ್ ಮಾಡಿಕೊಳ್ಳುತ್ತಾಳೆಂಬ ಸುದ್ದಿ ಕೇಳಿ ದೃಢಪಡಿಸಿಕೊಳ್ಳಲು ಹೋದ ಮಾಧ್ಯಮದವರೆದುರು ಆಕೆ ಬಾಯ್ ಕಟ್ ಮಾಡಿಸ್ಕೋಬೇಕು ಅಂದ್ರೆ, ಚಿತ್ರವನ್ನೇ ಬಾಯ್ಕಾಟ್ ಮಾಡ್ತೀನಿ . ಅಪ್ಪಿ  ತಪ್ಪಿ ಕೂಡಾ ನನ್ನ ಕೂದಲಿಗೆ ಕತ್ತರಿ ತಾಕಿಸೋಲ್ಲ ಅಂದಳಂತೆ. ಅಷ್ಟೇ ಅಲ್ಲ ಇನ್ಮುಂದೆ ಆಕೆ ಕೂದಲನ್ನು ಇನ್ನಷ್ಟು ಉದ್ದ ಬೆಳೆಸಿಕೊಳ್ಳುವ ಯೋಜನೆಯನ್ನೂ ಹಾಕಿಕೊಂಡಿದ್ದಾಳಂತೆ. ಕರೀನಾ ಕರಿ ಕೂದಲಿಗೆ ಕಲರ್ ಹಾಕೋಕು ಸೈ, ಬೇರೇನೇ ತೈಲ ಹಚ್ಚೋಕೂ ಸೈ...ಆದರೆ ಕಟ್ ಮಾಡೋಕೆ ಮಾತ್ರ ಸೈಫ್ ಹೇಳಿದ್ರೂ ಸೈ ಅನ್ನೋಲ್ವಂತೆ. ಆಕೆಗೆ ಸೋಪು, ಶಾಂಪೂ ಹಾಗೂ ತೈಲಗಳ ಜಾಹೀರಾತು ಸಿಕ್ಕಿರುವುದೂ ಆಕೆಯ ನೀಳಕೇಶದಿಂದಲೇ ಅಂತೆ. ಹಾಗಾಗಿ ಒಂದೊಂದು ಕೂದಲಿಗೂ ಬೆಲೆ ಇದೆ ಅನ್ನುತ್ತಾಳೆ ಕರೀನಾ!

ಅಂದ ಹಾಗೆ ಕರೀನಾ ಇದೀಗ ಮಾದ್ವಾನಿ ನಿರ್ದೇಶನದ ಡಚ್ ಧಾರವಾಹಿ ಪೆನೋಜಾ ಆಧಾರಿತ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಕಾಜೋಲ್ ಮಾಡಬೇಕಿದ್ದ ಅಜಯ್ ದೇವಗನ್ ನಿರ್ಮಾಣದ ಚಿತ್ರ ಕರೀನಾ ಪಾಲಿಗೆ ಸಿಕ್ಕಿದೆ. ಕಾರಣ ಅಜಯ್-ಕಾಜೋಲ್ ದಂಪತಿಯು ಮಗನ ಪಾಲನೆಗಾಗಿ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ತಿರೋದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com