ಸಿನಿಮಾರಂಗದಲ್ಲಿ ಲಿಂಗ ತಾರತಮ್ಯ ಇರಬಾರದು: ರಣ್‌ಬೀರ್ ಕಪೂರ್

ಬಾಲಿವುಡ್‌ನಲ್ಲಿ ಮಹಿಳಾ ಮೇಕಪ್ ಕಲಾವಿದರು ಕೆಲಸ ಮಾಡಬಹುದು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ...
ರಣ್‌ಬೀರ್ ಕಪೂರ್
ರಣ್‌ಬೀರ್ ಕಪೂರ್

ಮುಂಬೈ: ಬಾಲಿವುಡ್‌ನಲ್ಲಿ ಮಹಿಳಾ ಮೇಕಪ್ ಕಲಾವಿದರು ಕೆಲಸ ಮಾಡಬಹುದು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ ರಣ್‌ಬೀರ್ ಕಪೂರ್, ಸಿನಿಮಾ ರಂಗದಲ್ಲಿ ಲಿಂಗ ತಾರತಮ್ಯ ಹೋಗಲಾಡಿಸಬೇಕು ಎಂದಿದ್ದಾರೆ. ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆಯರು ದುಡಿಯುವಂತೆ ಇಲ್ಲಿಯೂ ದುಡಿಯುವ ಹಕ್ಕು ಅವರಿಗೆ ಇರಬೇಕು ಎಂದು ರಣ್‌ಬೀರ್ ಅಭಿಪ್ರಾಯ ಪಟ್ಟಿದ್ದಾರೆ.

ಸಿನಿಮಾರಂಗದಲ್ಲಿ ಮಹಿಳಾ ಮೇಕಪ್ ಕಲಾವಿದರಿಗೆ ಅವಕಾಶ ನೀಡತಕ್ಕದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಕೆಲಸದ ಸ್ಥಳದಲ್ಲಿ  ಲಿಂಗಭೇದ ಮಾಡುವುದು ಸಂವಿಧಾನ ಬಾಹಿರ. ಆದಾಗ್ಯೂ, ಮಹಿಳೆಯರು ಹೆಚ್ಚಿನ ಶ್ರಮದ ಕೆಲಸ ಮಾಡುತ್ತಾರೆ. ಆದ್ದರಿಂದ ಅವರಿಗೆ ಗಂಡಸರಿಗೆ ನೀಡುವ ಸಂಬಳಕ್ಕಿಂತ ಜಾಸ್ತಿಯೇ ನೀಡಬೇಕಿದೆ. ಇಂಥಾ ವ್ಯವಸ್ಥೆ ನಮ್ಮಲ್ಲಿ ಬರಬೇಕು ಎಂದು ನಾನು ಆಶಿಸುತ್ತೇನೆ.

ಬಾಲಿವುಡ್ ಪುರುಷ ಪ್ರಧಾನ ಕ್ಷೇತ್ರವಾಗಿದ್ದು ಇದರಿಂದಲೇ ಲಿಂಗ ತಾರತಮ್ಯ ಹುಟ್ಟಿಕೊಳ್ಳುತ್ತದೆ. ಸ್ಟಂಟ್ ಮಾಡುವುದರಲ್ಲಿಯೂ ಮಹಿಳೆಯರು ಪಾಲ್ಗೊಳ್ಳಬೇಕು. ಯಾವುದೇ ವಿಭಾಗವಿರಲಿ, ಎಲ್ಲ ಕಡೆ ಮಹಿಳೆಯರೇ ಪುರುಷರಿಗಿಂತ ಹೆಚ್ಚಿನ ಕೌಶಲ ಹೊಂದಿದ್ದಾರೆ ಎಂದು ರಣ್‌ಬೀರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com