
ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಬದಲಾಯಿಸಿದ್ದಾಳೆ! ಒಳ್ಳೆಯ ಹೆಸರು ಗಳಿಸಿ ಸಿನಿಮಾರಂಗದಲ್ಲಿ ಮಿಂಚುತ್ತಿರುವ ದೀಪಿಕಾಳಿಗೆ ಇದೇನಾಯ್ತು? ಎಂದು ಹುಬ್ಬೇರಿಸಬೇಡಿ. ಈಕೆ ತನ್ನ ಹೆಸರು ಬದಲಾಯಿಸಿಕೊಂಡಿದ್ದು ಟ್ವೀಟರ್‌ನಲ್ಲಿ!
28ರ ಹರೆಯದ ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಹಿಟ್‌ಗಳ ಮೇಲೆ ಹಿಟ್‌ಗಳನ್ನು ನೀಡಿದ ನಟಿ. ಇತ್ತೀಚೆಗೆ ಬಿಡುಗಡೆಯಾದ 'ಹ್ಯಾಪಿ ನ್ಯೂ ಇಯರ್' ಸಿನಿಮಾದ ಯಶಸ್ಸಿನ ನಂತರ ಟ್ವೀಟರ್‌ನಲ್ಲಿ ತನ್ನ ಹೆಸರನ್ನು 'ಲೀಲಾ' ಎಂದು ಬದಲಿಸಿಕೊಂಡಿರುವುದಕ್ಕೆ 'ರಾಮ್‌ಲೀಲಾ' ಸಿನಿಮಾದ ಪ್ರಭಾವವೇ ಕಾರಣವಿರಬೇಕು ಎಂದು ಆಕೆಯ ಪ್ರೊಫೈಲ್ ಫೋಟೋ ನೋಡಿದರೆ ಗೊತ್ತಾಗುತ್ತದೆ.
ಸದ್ಯ, ಪೀಕೂ ಚಿತ್ರದಲ್ಲಿ ಬ್ಯುಸಿಯಾಗಿರುವ ದೀಪಿಕಾಳ ಕೈಯಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ 'ಬಾಜಿರಾವ್ ಮಸ್ತಾನಿ' ಚಿತ್ರವೂ ಇದೆ.
ಇದೀಗ ಟ್ವೀಟರ್‌ನಲ್ಲಿ ಹೆಸರು ಬದಲಿಸುವ ಮೂಲಕ ದೀಪಿಕಾ ಸುದ್ದಿಗೆ ಗ್ರಾಸವಾಗಿದ್ದು, 'ಲೀಲಾ' ಹೆಸರನ್ನು ಆಕೆಯ ಅಭಿಮಾನಿಗಳು ಮತ್ತು ಫಾಲೋವರ್‌ಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಟ್ವೀಟರ್‌ನಲ್ಲಿ ದೀಪಿಕಾ : https://twitter.com/deepikapadukone
Advertisement