ಮೇರಿ ಕೋಮ್ ಹಂಡ್ರೆಡ್ ಕ್ರೋರ್ ಕ್ಲಬ್ ಸೇರದೇ ಹೋದ್ರೆ ಏನಂತೆ, ಪ್ರಿಯಾಂಕಾ ಛೋಪ್ರಾ ಮಾತ್ರ ಶತಾಯುಗತಾಯ ಶತಕೋಟಿ ಕ್ಲಬ್ ಸೇರಲೇಬೇಕು ಅಂತ ಪಣ ತೊಟ್ಟಂತಿದೆ. ಇದು ಆಕೆಯ ಸಿನಿಮಾ ಮೂಲಕ ಅಲ್ಲ. ಪ್ರಿಯಾಂಕಾಳಿಗೆ ಮೇರಿ ಕೋಮ್ ಸಿನಿಮಾ ನಂತರ ಒಂದು ಮೇರೀ ಹೋಮ್ ಬೇಕು ಅನಿಸಿದೆ.
ಹಾಗಾಗಿ ವರ್ಸೋವಾದಲ್ಲಿ ಒಂದು ಮನೆ ತಗೊಳ್ಳೋದಕ್ಕೆ ಸ್ಕೆಚ್ ಹಾಕಿದ್ದಾಳೆ. ಅಂತಿಂಥ ಮನೆ ಅಲ್ಲ. ಹದಿನೈದು ಬೆಡ್ ರೂಮುಗಳಿರೋ ಮನೆ. ಇನ್ನೂ ಮದುವೆ ಕೂಡ ಆಗಿಲ್ಲ, ಇರೋ ಒಂದು ಬೆಡ್ರೂಮಲ್ಲೇ ಮಲ್ಕೊಳೋಕೆ ಟೈಮಿಲ್ಲ, ಆದ್ರೂ ಹದಿನೈದು ಬೆಡ್ರೂಮಿನ ಮನೆ!
ಮನೆಯ ಬೆಲೆ ನೂರುಕೋಟಿ ಸ್ವಾಮಿ. ನೂರು ಕೋಟಿ ಅಂತ ಹೇಳಿದ್ದೇ ತಡ, ಪ್ರಿಯಾಂಕಳಿಗೆ ಮನೆ ಮೇಲಿನ ಆಸೆ ಇನ್ನೂ ಹೆಚ್ಚಿದೆ. ಆದರೆ ಗೃಹಪ್ರವೇಶ ಆಗೋಕೆ ಗ್ರಹಚಾರ ಚೆನ್ನಾಗಿರಬೇಕಲ್ವೇ. ಅದೇನೋ ವಾಸ್ತು ಪ್ರಾಬ್ಲಮ್ಮಂತೆ. ಅಲ್ಲದೆ ನೂರುಕೋಟಿ ಅಂತ ಹೇಳಿದ ಪಾರ್ಟಿ ಆ ಮೇಲೆ ದಿಢೀರ್ ರೇಟ್ ಏರಿಸಿದನಂತೆ. ಹಂಗೆಲ್ಲ ಆಗಿ ಹಿಂಗಾಗಿ ಸದ್ಯಕ್ಕೆ ಪ್ರಿಯಾಂಕಾಳಿಗೆ ಬಾಡಿಗೆ ಅಪಾರ್ಟ್‌ಮೆಂಟೇ ಗತಿಯಾಗಿದೆ.