ಮೂಢನಂಬಿಕೆ ಪಾಲನೆ ಮಾಡುತ್ತಿರುವ ಬಿಪಾಶಾ ಬಸು

ಇಂದಿನ ದಿನಗಳಲ್ಲಿಯೂ ಪೂರ್ವಾಗ್ರಹ ಮೂಢನಂಬಿಕೆಗಳು ಜನರಲ್ಲಿ ಬೇರೂರಿರುವುದನ್ನು ಕಾಣುತ್ತೇವೆ. ಜನಸಾಮಾನ್ಯರಿಂದ ಹಿಡಿದು ಪ್ರಖ್ಯಾತ ವಿಜ್ಞಾನಿಗಳವರೆಗೂ ಶಕುನಗಳನ್ನು ನಂಬುವವರಿದ್ದಾರೆ...
ಮೂಢನಂಬಿಕೆ ಪಾಲನೆ ಮಾಡುತ್ತಿರುವ ಬಿಪಾಶಾ ಬಸು
ಮೂಢನಂಬಿಕೆ ಪಾಲನೆ ಮಾಡುತ್ತಿರುವ ಬಿಪಾಶಾ ಬಸು
Updated on

ಇಂದಿನ ದಿನಗಳಲ್ಲಿಯೂ ಪೂರ್ವಾಗ್ರಹ ಮೂಢನಂಬಿಕೆಗಳು ಜನರಲ್ಲಿ ಬೇರೂರಿರುವುದನ್ನು ಕಾಣುತ್ತೇವೆ. ಜನಸಾಮಾನ್ಯರಿಂದ ಹಿಡಿದು ಪ್ರಖ್ಯಾತ ವಿಜ್ಞಾನಿಗಳವರೆಗೂ ಶಕುನಗಳನ್ನು ನಂಬುವವರಿದ್ದಾರೆ. ಬಹುತೇಕ ಖ್ಯಾತ ನಟರೂ ಒಂದಲ್ಲ ಒಂದು ಶಕುನವನ್ನು ನಂಬುವವರೇ.

ಭಾರತದ ಸಿನಿತಾರೆಯರು ಮಾತ್ರವಲ್ಲ ಇತರ ದೇಶಗಳ ಸಿನಿ ತಾರೆಯರಲ್ಲೂ ಇದನ್ನು ಗಮನಿಸಬಹುದು. ಉದಾಹರಣೆಗೆ, ವಿಶಿಷ್ಟವಾದ ಸಂಖ್ಯಾಸರಣಿಯನ್ನು ಪಾಲಿಸುವುದು, ಒಂದು ಬಗೆಯ ಕಲ್ಲಿನ ಆಭರಣಗಳನ್ನು ಧರಿಸುವುದು, ತಮ್ಮ ಚಿತ್ರಗಳನ್ನು ನಿರ್ದಿಷ್ಟ ದಿನಾಂಕದಂದೇ ಬಿಡು ಗಡೆಗೊಳಿಸುವುದು ಇತ್ಯಾದಿ..

ಖ್ಯಾತ ನಟಿ ಬಿಪಾಶಾ ಬಸು ಕೂಡ ಇದಕ್ಕೆ ಹೊರತಾಗಿಲ್ಲ. ಪ್ರತಿ ಶನಿವಾರ ಅವರು ತಮ್ಮ ಕಾರಿಗೆ ನಿಂಬೆಹಣ್ಣು ಮತ್ತು ಹಸಿಮೆಣಸಿನ ಒಂದು ಹಾರವನ್ನು ಖರೀದಿಸಿ ತಗುಲಿ ಹಾಕುತ್ತಾರಂತೆ. ಇದು ತಮ್ಮ ತಾಯಿ ತಮಗೆ ಕಲಿಸಿದ್ದು, ಇದರಿಂದ ತಮಗೆ ಯಾವುದೇ ಆಪತ್ತು ಬರದು ಎಂದು ಅವರು ಬಲವಾಗಿ ನಂಬಿದ್ದಾರಂತೆ! ಅವರವರ ನಂಬಿಕೆ ಅವರವರಿಗೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com