
ಸಿನಿ ಸ್ಟಾರ್‍ಗಳ ಮಕ್ಕಳು ಚಿತ್ರರಂಗ ಪ್ರವೇಶಿಸುವುದು ಸಾಮಾನ್ಯ. ಆದರೆ ಸ್ಟಾರ್‍ಗಳ ಮೊಮ್ಮಕ್ಕಳಲ್ಲಿ ಹೆಚ್ಚಿನವರು ಚಿತ್ರರಂಗದಿಂದ ದೂರ ಉಳಿಯುವುದೇ ಹೆಚ್ಚು. ಇದೀಗ ಬಚ್ಚನ್ ಕುಟುಂಬದಿಂದ ಹೀರೊಯಿನ್ ಎಂಟ್ರಿಯಾಗುವ ಸಾಧ್ಯತೆಯಿರುವ ಸುದ್ದಿ ಮಹತ್ವ ಪಡೆದುಕೊಂಡಿದೆ.
ಹೌದು ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಚಿತ್ರರಂಗ ಪ್ರವೇಶಿಸುವ ಮನ್ಸೂಚನೆ ನೀಡಿದ್ದಾರೆ. ಅಮಿತಾಭ್-ಜಯಾರ ಮಗಳು ಶ್ವೇತಾ ಬಚ್ಚನ್ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಈಗ ಶ್ವೇತಾ ಹಾಗೂ ನಿಖಿಲ್ ನಂದಾರ ಮಗಳು ನವ್ಯಾ ತಮ್ಮ ಅಜ್ಜಿಯ ಹಾದಿಯಲ್ಲಿ ಸಾಗುವ ಹಂಬಲದಲ್ಲಿದ್ದಾರೆ. ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಬಿಗ್ ಬಿಯ ಪದ್ಮವಿಭೂಷಣ ಪ್ರಶಸ್ತಿ ಸಮಾರಂಭದಲ್ಲಿ ಸೆಲೆಬ್ರಿಟಿಗಳ ಸಾಲಿನಲ್ಲಿ ಸ್ಥಾನ ಪಡೆದ ಚೆಂದುಳ್ಳಿ ಚೆಲುವೆ ನವ್ಯಾ ನವೇಲಿ ಚಿತ್ರರಂಗ ಪ್ರವೇಶಿಸಿದರೆ ಅಚ್ಚರಿಯೇನಿಲ್ಲ.
ಬಾಲಿವುಡ್‍ನ ಬೆಡಗಿ ಆಲಿಯಾಭಟ್ ಜತೆ ಚಿತ್ರಗಳ ಕುರಿತು ಚರ್ಚೆ ನಡೆಸುವ ನವ್ಯಾ, ಅತ್ತೆ ಐಶ್ವರ್ಯಾರೊಂದಿಗೆ ಅಭಿನಯದ ಟಿಪ್ಸ್ ಪಡೆಯುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಮೂಲಕ ಬಚ್ಚನ್ ಫ್ಯಾಮಿಲಿಯ ಮೂರನೇ ತಲೆಮಾರು ಬಾಲಿವುಡ್‍ಗೆ ಎಂಟ್ರಿ ಕೊಡಲಿದೆ ಎಂಬ ಚಿತ್ರರಂಗದ ಮಂದಿಯ ಗಾಸಿಪ್‍ಗೆ ಜೀವ ಸಿಕ್ಕಂತಾಗಿದೆ.
Advertisement