ಮಲೈಕ ಅರೋರ ಖಾನ್
ಮಲೈಕ ಅರೋರ ಖಾನ್

ಐಟಂ ಸಾಂಗ್ ಡಾನ್ಸ್ ಮಗನ ಮೇಲೆ ಪರಿಣಾಮ ಬೀರಲ್ಲ: ಮಲೈಕ ಅರೋರ ಖಾನ್

ಐಟಂ ಸಾಂಗ್ ಡ್ಯಾನ್ಸ್ ನಿಂದಲೇ ಬಾಲಿವುಡ್ ಜನತೆಯ ಮನಗೆದ್ದು ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿರುವ ಬಾಲಿವುಡ್ ಮುನ್ನಿ ಬದನಾಂ ಚೆಲುವೆ ಮಲೈಕ ಅರೋರ ಖಾನ್, ಚಿತ್ರದ ಐಟಂ ಸಾಂಗ್ ನೃತ್ಯವು ತಮ್ಮ ಮಗನ ಮೇಲೆ ಯಾವ ರೀತಿಯಲ್ಲೂ...
Published on

ಐಟಂ ಸಾಂಗ್ ಡ್ಯಾನ್ಸ್ ನಿಂದಲೇ ಬಾಲಿವುಡ್ ಜನತೆಯ ಮನಗೆದ್ದು ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿರುವ  ಬಾಲಿವುಡ್ ಮುನ್ನಿ ಬದನಾಂ ಚೆಲುವೆ ಮಲೈಕ ಅರೋರ ಖಾನ್, ಚಿತ್ರದ ಐಟಂ ಸಾಂಗ್ ನೃತ್ಯವು ತಮ್ಮ ಮಗನ ಮೇಲೆ ಯಾವ ರೀತಿಯಲ್ಲೂ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ.

ಐಟಂ ಸಾಂಗ್ ಡ್ಯಾನ್ಸ್ ಕುರಿತಂತೆ ನಿಮ್ಮ ಮಗನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ಮೈಲಕ ಖಾನ್, ನನ್ನ ಮಗ ಇನ್ನೂ ತುಂಬಾ ಚಿಕ್ಕವನು, ಚಿತ್ರದ ಐಟಂ ಸಾಂಗ್ ನೃತ್ಯ ಅವನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅವನಿಗೆ ನನ್ನ ಡ್ಯಾನ್ಸ್ ಇಷ್ಟವಾದರೆ ನೇರವಾಗಿ ನನ್ನ ಬಳಿ ಬಂದು ಚೆನ್ನಾಗಿದೆ ಎಂದು ಹೇಳುತ್ತಾನೆ.

ಹಾಡುಗಳು ಚಿತ್ರದ ಮನರಂಜನೆಗಳಲ್ಲಿ ಒಂದು ಭಾಗವಷ್ಟೇ. ಈ ಹಾಡುಗಳನ್ನು ಯಾವ ರೀತಿಯಲ್ಲಿ ದೃಶ್ಯೀಕರಿಸಲಾಗುತ್ತದೆ ಮತ್ತು ಯಾವ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ ಎಂಬುದರ ಮೇಲೆ ಅದರ ಮೌಲ್ಯ ಪ್ರತಿಬಿಂಬಿತವಾಗಿರುತ್ತದೆ. ಕಲೆ ತೋರಿಸಲು ಅವಕಾಶ ಸಿಕ್ಕಾಗ ಬಹಳ ಖುಷಿಯಾಗುತ್ತದೆ. ನಾನು ನೃತ್ಯ ಮಾಡುವ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ.

ಐಟಂ ಸಾಂಗ್ ಎಂಬ ಹೆಸರು ನನಗೆ ಇಷ್ಟವಿಲ್ಲ. ಆ ಪದವನ್ನು ನಾನು ಯಾವಾಗಲೂ ದ್ವೇಷಿಸುತ್ತೇನೆ. ಐಟಂ ಸಾಂಗ್ ಎಂಬ ಪದದ ಬದಲು ವಿಶೇಷ ಹಾಡು ಎಂಬ ಹೆಸರು ಕೂಗಲು ನಾನು ಇಷ್ಟಪಡುತ್ತೇನೆ ಎಂದು ಮಲೈಕ ಹೇಳಿದ್ದಾರೆ.

ಇದೇ ವೇಳೆ ಖಾಸಗಿ ಚಾನೆಲ್ ಒಂದರ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಮಾತನಾಡಿರುವ ಮಲೈಕ, ಇಂಡಿಯಾಸ್ ಗಾಟ್ ಟ್ಯಾಲೆಂಟ್ ಸೀಸನ್ 6ನಲ್ಲಿ ಮೂರು ತೀರ್ಪುಗಾರರಿದ್ದು, ಅವರಲ್ಲಿ ನಾನು ಒಬ್ಬಳು. ತೀರ್ಮಾನ ಕೈಗೊಳ್ಳುವಾಗ ಪ್ರತಿಯೊಬ್ಬರ ಪ್ರತಿಕ್ರಿಯೆಯಲ್ಲೂ ವಿಭಿನ್ನತೆಗಳು ಕಂಡುಬರುವುದರಿಂದ ಮೂವರ ನಿರ್ಧಾರದಲ್ಲೂ ಕೆಲವೊಮ್ಮೆ ಹೆಚ್ಚುಕಡಿಮೆ ಆಗುತ್ತದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಹೊಸ ಹೊಸ ಪ್ರತಿಭೆಗಳು ಕಾಣಸಿಗುತ್ತಿದ್ದು, ಹೊಸ ಹೊಸ ಅನುಭವಗಳಾಗುತ್ತಿದೆ ಮಲೈಕ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com