ಕಿಯಾರ ಅಡ್ವಾಣಿ - ಎಂ.ಎಸ್.ಧೋನಿ
ಬಾಲಿವುಡ್
ಧೋನಿಗೆ ಹೆಂಡ್ತಿ ಸಿಕ್ಕಳು!
ಬಾಲಿವುಡ್‌ನಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮೇಲೊಂದು ಸಿನಿಮಾ ಬರುತ್ತದೆ ಎಂಬ ಸುದ್ದಿಯೆದ್ದು...
ಬಾಲಿವುಡ್‌ನಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮೇಲೊಂದು ಸಿನಿಮಾ ಬರುತ್ತದೆ ಎಂಬ ಸುದ್ದಿಯೆದ್ದು ಕೆಲ ತಿಂಗಳೇ ಆದವು.
ಧೋನಿ ಜೀವನವನ್ನಾಧರಿಸಿ ನಿರ್ಮಾಣವಾಗುತ್ತಿರುವ 'ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಎಂಬ ಈ ಸಿನಿಮಾಕ್ಕೆ ನೀರಜ್ ಪಾಂಡೆ ನಿರ್ದೇಶಕ. ಸುಶಾಂತ್ ಸಿಂಗ್ ರಜಪೂತ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಪಾತ್ರಕ್ಕೆ ಯಾರೂ ಸಿಕ್ಕಿರಲಿಲ್ಲ.
ಸಿಕ್ಕಿರಲಿಲ್ಲ ಎನ್ನುವುದಕ್ಕಿಂತ ನಾಯಕಿಯ ಪಾತ್ರಕ್ಕೆ ಯಾರ್ಯಾರೋ ನಟಿಗಳ ಹೆಸರು ಈ ವಿಚಾರದಲ್ಲಿ ಗಾಸಿಪ್‌ಗೆ ಕಾರಣ ಆಗುತ್ತಿದ್ದವು. ಇದೀಗ ಆ ಎಲ್ಲಾ ಗಾಸಿಪ್‌ಗೂ ತೆರೆ ಬಿದ್ದಿದ್ದು, ಫಗ್ಲಿ ಸಿನಿಮಾ ಖ್ಯಾತಿಯ ಕಿಯಾರ ಅಡ್ವಾಣಿ ಅವರು ಧೋನಿ ಪತ್ನಿ ಸಾಕ್ಷಿಯ ಸ್ಥಾನವನ್ನು ತುಂಬಲಿದ್ದಾಳೆ.
ಧೋನಿ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ಅಡ್ವಾಣಿ, 'ಒಳ್ಳೆಯ ಪಾತ್ರ ಇದು, ಶೀಘ್ರವೇ ನಾನು ಧೋನಿಯ ಪತ್ನಿ ಸಾಕ್ಷಿ ಅವರನ್ನು ಭೇಟಿ ಆಗ್ತೀನಿ' ಎಂದಿದ್ದಾಳೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ