ಮಕ್ಕಳ ಸೈನ್ಯ: ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಮಾಜಿ ಸೈನಿಕರ ಮಕ್ಕಳು

ಕಳೆದ 69 ದಿನಗಳಿಂದ ದೆಹಲಿಯ ಜಂತರ್ ಮಂತರ್ ಮಿನಿ ಯುದ್ಧಭೂಮಿ. ಆದರೆ ಶತ್ರುಗಳಿಲ್ಲ. ಆ ಮಾಜಿ ಸೈನಿಕರಿಗೆ ಸರ್ಕಾರದ ಮೇಲಷ್ಟೇ ಮುನಿಸು. 'ಸಮಾನ...
ಪ್ರೀತಿ ಝಿಂಟಾ - ಅನುಷ್ಕಾ ಶರ್ಮಾ - ಪ್ರಿಯಾಂಕಾ ಚೋಪ್ರಾ
ಪ್ರೀತಿ ಝಿಂಟಾ - ಅನುಷ್ಕಾ ಶರ್ಮಾ - ಪ್ರಿಯಾಂಕಾ ಚೋಪ್ರಾ
Updated on

ಕಳೆದ 69 ದಿನಗಳಿಂದ ದೆಹಲಿಯ ಜಂತರ್ ಮಂತರ್ ಮಿನಿ ಯುದ್ಧಭೂಮಿ. ಆದರೆ ಶತ್ರುಗಳಿಲ್ಲ. ಆ ಮಾಜಿ ಸೈನಿಕರಿಗೆ ಸರ್ಕಾರದ ಮೇಲಷ್ಟೇ ಮುನಿಸು.  'ಸಮಾನ ಪಿಂಚಣಿ'ಗಾಗಿ ಕೂಗಿ ಕೂಗಿ ಅವರ ಗಂಟಲಿನ ಫಿರಂಗಿ ಇನ್ನೂ ಧಮ್ ಕಳೆಕೊಂಡಿಲ್ಲ. ಯೋಗ್ಯ ಪಿಂಚಣಿಯನ್ನು ಭಿಕ್ಷೆ ರೀತಿ ಕೇಳಬೇಕಾದ ಸ್ಥಿತಿಗೆ ಹೋಗಿರುವ ನಮ್ಮ ಮಾಜಿ ಸೈನಿಕರಲ್ಲಿ ಬಹುತೇಕರು ಪಾಕ್ ವಿರುದ್ಧದ ಯುದ್ಧದಲ್ಲಿ ಹೋರಾಡಿದವರು. ಚೀನಾ ದಾಳಿ ಮಾಡಿದಾಗಿ ನೋವುಂಡವರು. ಆದರೆ, ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣ ಮಾತ್ರಿ ಗೊತ್ತಾಗುತ್ತಿಲ್ಲ.

ಅಂದಹಾಗೆ, ಈ ಸೈನಕರಿಂದ ನಮ್ಮ ದೇಶದ ರಕ್ಷಣೆಗಷ್ಟೇ ಲಾಭ ಆಗಿದ್ದಲ್ಲ. ಬಾಲಿವುಡ್‌ನಲ್ಲಿ ಇವತ್ತೇನು ಮಿಂಚುತ್ತಿರುವ ಅನೇಕ ನಟಿಯರು ನಮ್ಮ ಮಾಜಿ ಸೈನಿಕರ ಮಕ್ಕಳು. ಈ ಮೂಲಕ ಸಿನಿಮಾ ರಂಗಕ್ಕೂ ಸೈನಿಕರು ದೊಡ್ಡ ಕೊಡುಗೆಯನ್ನೇ ಕೊಟ್ಟಿದ್ದಾರೆ. ಅಪ್ಪನದ್ದು ಗಡಿಯಲ್ಲಿನ ಸಮರ, ಮಗಳದ್ದು ಸೌಂದರ್ಯ ಸಮರ. ಆರ್ಮಿ ಹಿನ್ನೆಲೆಯ ಆ ನಟಿಯರು ಯಾರು ಅಂತ ಗೊತ್ತಾ?

ಸುಶ್ಮಿತ್ ಸೇನ್
ಬಾಲಿವುಡ್‌ನ ಭಾರಿ ಧೈರ್ಯದ ನಟಿ ಸುಶ್ಮಿತಾ ಸೇನ್,  ವಿಂಗ್ ಕಮಾಂಡರ್ ಸುಬೀರ್ ಸೇನ್‌ರ ಮಗಳು. ಆರಂಭದಲ್ಲಿ ಮಗಳನ್ನು ಅದ್ಭುತ ಭಾಷಗಾರ್ತಿ ಮತ್ತು ಈಜುಪಟುವಾಗಿ ರೂಪಿಸಿದ ಸುಬೀರ್, 1994ರಲ್ಲಿ ಮಿಸ್‌ವರ್ಲ್ಡ್‌ಗೂ ಕಳಿಸಿಕೊಟ್ರು. ಇವತ್ತು ಈಕೆ ಸಿಂಗ್ ಪೇರೆಂಟ್ ಆಗಿ ಇಬ್ಬರು ಹೆಣ್ಮಕ್ಕಳನ್ನು ಸಾಕಿಕೊಂಡಿದ್ದಾಳಂದ್ರೆ, ಅದು ಕೂಡ ಆರ್ಮಿಯ ಪ್ರಭಾವದಿಂದ ಬಂದ ಧೈರ್ಯವೇ.

ಪ್ರಿಯಾಂಕಾ ಚೋಪ್ರಾ
ಈಕೆಯ ತಂದೆ-ತಾಯಿ ಇಬ್ಬರೂ ಆರ್ಮಿಗೆ ಸೇವೆ ಸಲ್ಲಿಸಿದವರು. ತಂದೆ ಡಾ.ಅಶೋಕ್ ಚೋಪ್ರಾ, ತಾಯಿ ಡಾ.ಮಧು ಅಖೌರಿ ಸೇನೆಯಲ್ಲಿ ವೈದ್ಯ ವೃತ್ತಿಯಲ್ಲಿದ್ದರು. 3 ವರ್ಷದಿಂದ ಕ್ಯಾನ್ಸರ್‌ಗೆ ತುತ್ತಾಗಿದ್ದ ಡಾ.ಅಶೋಕ್ ಚೋಪ್ರಾ 2013ರಲ್ಲಿ ನಿಧನವಾದರು. ಅಶೋಕ್ ಒಳ್ಳೆಯ ಹಾಡುಗಾರ. ಅಮೆರಿಕದಲ್ಲಿ ಪೋಸ್ಟಿಂಗ್‌ನಲ್ಲಿದ್ದಾಗ ಮಗಳಿಗೆ ವೆಸ್ಟರ್ನ್ ಕ್ಲಾಸಿಕಲ್ ಡ್ಯಾನ್ಸ್ ಕಲಿಸಿ, ಹಾಡುವುದನ್ನೂ ಹೇಳಿಕೊಟ್ಟರು. ಆರ್ಮಿಯ ಅನೇಕ ಕಾರ್ಯಕ್ರಮಗಳಿಗೆ ಪಿಂಕಿ ಹಾಡಿದ್ದಾಳೆ.

ಸೆಲೆನಾ ಜೇಟ್ಲಿ
ಅಪ್ಪನಿಗೆ ಮಗಳು ಡಾಕ್ಟರ್ ಆಗ್ಬೇಕು, ಮಗಳಿಗೆ ತಾನು ಪೈಲಟ್ ಆಗ್ಬೇಕು, ಅಮ್ಮನಿಗೆ ಮಗಳು ಮಾಡೆಲ್ ಆಗ್ಬೇಕು-ಎಂಬ ಮೂರು ಕನಸುಗಳ ಮಧ್ಯೆ ಬೆಳೆದವಳು ಸೆಲೆನಾ ಜೇಟ್ಲಿ. ಆದರೆ, ಆಗಿದ್ದು ಅಮ್ಮನ ಕನಸಿನಂತೆಯೇ. ಈಕೆಯ ಅಪ್ಪ ವಿ.ಕೆ.ಜೇಟ್ಲಿ ಭಾರತೀಯ ಸೇನೆಯ ಕರ್ನಲ್. ತಾಯಿ ಸೇನೆಯಲ್ಲಿ ನರ್ಸ್. 2001ರಲ್ಲಿ 'ಮಿಸ್ ಇಂಡಿಯಾ' ವಿಜೇತೆಯಾದಾಗ ಅಪ್ಪನೇ 'ಇನ್ನು ನೀನು ಸಿನಿಮಾಕ್ಕೆ ಹೋಗು' ಎಂದಿದ್ದು. ಅಂದಹಾಗೆ ಸೆಲಿನಾ ಹುಟ್ಟಿದ್ದು ಕಾಬೂಲ್‌ನಲ್ಲಿ!

ಅನುಷ್ಕಾ ಶರ್ಮಾ
'ಜಬ್ ತಕ್ ಹೈ ಜಾನ್‌'ನಲ್ಲಿ ಆರ್ಮಿಯ ಮೇಜರ್ ಹಿಂದೆಬಿದ್ದ ಈ ಕ್ಯೂಟ್ ಹುಡುಗಿ ಅಲ್ಲಿ ಡಿಸ್ಕವರಿ ಚಾನೆಲ್‌ನವಳು. ಆದರೆ, ರಿಯಲ್ ಲೈಫಿನಲ್ಲಿ ಅನುಷ್ಕಾ ಶರ್ಮಾ ಮೇಜರ್ ಮಗಳು! ತಂದೆ ಅಜಯ್ ಕುಮಾರ್ ಶರ್ಮಾ ಮಗಳನ್ನು ಮಾಡೆಲ್ ಮಾಡಿದರು. ಆರ್ಮಿ ಮೆಸ್‌ನ ಅನೇಕ್ ಫ್ಯಾಶನ್ ಶೋಗಳಲ್ಲಿ ಮಗಳ ವೈಯ್ಯಾರಕ್ಕೆ ಬೆರಗಾದರು. ಆರ್ಮಿ ನೆರಳಿಂದ ಅನುಷ್ಕಾ ಕಲಿತಿದ್ದು ಮುಖ್ಯವಾಗಿ ಶಿಸ್ತು ಅಂತೆ!

ಪ್ರೀತಿ ಝಿಂಟಾ
ಹಿಮಾಚಲ ಪ್ರದೇಶದ ಆರ್ಮಿಯ ಪರಿಸರವೆಲ್ಲ ಪ್ರೀತಿ ಝಿಂಟಾಗೆ ಚೆನ್ನಾಗಿ ಗೊತ್ತು. ಈಕೆಯ ತಂದೆ ದುರ್ಗಾನಂದ್ ಝಿಂಟಾ ಅಲ್ಲಿ ಮೇಜರ್ ಆಗಿದ್ದಂಥವರು. ಅಣ್ಣ ದೀಪಾಂಕರ್ ಕೂಡ ಸೇನೆಯಲ್ಲಿದ್ದಾನೆ. ಅಪ್ಪ ಮಗಳಲ್ಲಿ ಸ್ಪೋರ್ಟ್ಟ್ ಸ್ಕಿಲ್ಸ್ ಅನ್ನು ಬೆಳೆಸಿದರು. ದುರ್ಗಾನಂದ್ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ. ತೆಂಡೂಲ್ಕರ್ ಅಭಿಮಾನಿ ಬೇರೆ. ಪಂಜಾಬ್ ಐಪಿಎಲ್ ತಂಡದ ಒಡತಿಯಾಗಿ ಪ್ರೀತಿ, ಅಪ್ಪನ ಆಟವನ್ನು ನೆನಪಿಸಿಕೊಳ್ಳುತ್ತಾಳೆ.

ನೇಹಾ ಧೂಪಿಯಾ
ಈಕೆಯ ತಂದೆ ಪ್ರದೀಪ್ ಸಿಂಗ್ ಧೂಪಿಯಾ ನೌಕಾದಳದಲ್ಲಿ ಕಮಾಂಡರ್ ಆಗಿದ್ದವರು. ಮಗಳ ಸೌಂದರ್ಯ ಗೆದ್ದೇ ಗೆಲ್ಲುತ್ತದೆಂದು ವಿಶ್ವಾಸವಿಟ್ಟುಕೊಂಡು ಮಿಸ್ ಇಂಡಿಯಾಕ್ಕೆ ಕಳುಹಿಸಿದಾಗ ಅಲ್ಲೇನೂ ಸೋಲಾಗಲಿಲ್ಲ. ಈಗಲೂ ನೇಹಾ ಧೂಪಿಯಾ 'ನೇವಿ ಕ್ವೀನ್ ಕಂಟೆಸ್ಟ್‌' ಜಡ್ಜ್ ಆಗಿ ಹೋಗುತ್ತಾಳೆ.

ಲಾರಾ ದತ್
ಭಾರತದ ಅನೇಕ ಆರ್ಮಿ ಬೇಸ್‌ಗಳಲ್ಲಿ ಲಾರಾ ಒಡಾಡಿದ್ದಾಳೆ. ಈಕೆಯ ತಂದೆಯೂ ವಿಂಕ್ ಕಮಾಂಡರ್. ದೊಡ್ಡ ಅಕ್ಕ ಸಬ್ರಿನಾ ಏರ್‌ಪೋರ್ಸಿನಲ್ಲಿದ್ದಾಳೆ. ಲಾರಾಗೆ ಪೈಲಟ್ ಕ್ಯಾಬೀನ್‌ನಲ್ಲಿ ಕುಳಿತ ಅನುಭವವೂ ಉಂಟು. ಏರ್‌ಪೋರ್ಸ್ ಕ್ಲಬ್‌ನ ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚಿಯಾದ ಮೇಲೆಯೇ ಈಕ 'ಭುವನ ಸುಂದರಿ' ಆದವಳು. ತಂದೆ ಕ್ರೀಡೆಯನ್ನೂ ಇಷ್ಟಪಡುತ್ತಿದ್ದರಿಂದ ಟೆನಿಸಿಗ ಮಹೇಶ್ ಭೂಪತಿ ಮೇಲೆ ಪ್ರೇಮದ ಕಣ್ಣಿಡಲು ಕಾರಣ ಸಿಕ್ಕಿತಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com