ಮುಂಬೈ: ಬಿಡುಗಡೆಯಾಗಬೇಕಿರುವ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ 'ಕಟ್ಟಿ ಬಟ್ಟಿ'ಯಲ್ಲಿ ಒಟ್ಟಾಗಿ ನಟಿಸುತ್ತಿರುವ ಇಮ್ರಾನ್ ಖಾನ್ ಮತ್ತು ಕಂಗನಾ ರನೌತ್ ಸಿನೆಮಾದ 'ಲಿಪ್ ಟು ಲಿಪ್ ಕಿಸ್ಸಿಯಾನ್' ಹಾಡಿನ ಚಿತ್ರೀಕರಣದ ವೇಳೆ ೨೪ ಗಂಟೆಗಳ ಕಾಲ ಚುಂಬಿಸಿದ್ದಾರಂತೆ.
ಈ ಜೋಡಿ ಹಾಡಿಗಾಗಿ ಮೂರು ದಿನಗಳು ಸತತವಾಗಿ ಎಂಟೆಂಟು ಗಂಟೆ ಚುಂಬಿಸಿದ್ದಾರಂತೆ. ಚಲನಚಿತ್ರ ನಿರ್ದೇಶಕರು ಮೊದಲ ಬಾರಿಗೆ ಭಾರತದಲ್ಲಿ ಸ್ಟಾಪ್ ಮೋಷನ್ ತಂತ್ರಜ್ಞಾನ ಬಳಸಿದ್ದಾರೆ ಎಂದು ತಿಳಿಯಲಾಗಿದೆ.
"ಇದು ಭಾರತದಲ್ಲಿ ಹೊಸ ತಂತ್ರಜ್ಞಾನ. ಬಹಳ ಆಸಕ್ತಿದಾಯಕವಾಗಿತ್ತು. ಹಾಡೂ ಬಹಳ ಚೆನ್ನಾಗಿ ಮೂಡಿಬಂದಿದೆ. ಇಮ್ರಾನ್ ಮತ್ತು ಕಂಗನ ಇಬ್ಬರೂ ವೃತ್ತಿಪರರು" ಎಂದು ಸಿನೆಮಾದ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಖಿಲ್ ಅದ್ವಾನಿ ನಿರ್ದೇಶನದ 'ಕಟ್ಟಿ ಬಟ್ಟಿ' ಆಧುನಿಕ ಯುಗದ ಸಂಬಂಧಗಳ ಕಥೆ ಹೊಂದಿದೆ. ಸೆಪ್ಟಂಬರ್ ೧೮ರಂದು ಸಿನೆಮಾ ಬಿಡುಗಡೆಯಾಗಲಿದೆ.
Advertisement