ಚೆನ್ನೈ: ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಯ ರೈತರ ಸಹಾಯಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ 90 ಲಕ್ಷ ರುಪಾಯಿ ನೀಡಿದ್ದರು. ಇದೀಗ ಮಹಾಮಳೆಗೆ ನಲುಗಿರುವ ಚೆನ್ನೈನ ಪುನರ್ವಸತಿಗಾಗಿ 1 ಕೋಟಿ ರುಪಾಯಿಯನ್ನು ನೀಡಿದ್ದಾರೆ.
ಕುಂಭದ್ರೋಣ ಮಳೆಯಿಂದಾಗಿ ತತ್ತರಿಸಿರುವ ಮಹಾನಗರದ ಭೀಕರ ಚಿತ್ರಗಳನ್ನು ವೀಕ್ಷಿಸಿದ ಬಳಿಕ ಅಕ್ಷಯ್ ಕುಮಾರ್ ನಿರ್ದೇಶಕ ಪ್ರಿಯದರ್ಶನ್ ಅವರನ್ನು ಸಂಪರ್ಕಿಸಿ ಧನಸಹಾಯ ಮಾಡಲು ನಿರ್ಧರಿಸಿದ್ದಾರೆ.
ಮಹಾಮಳೆಯಿಂದಾಗಿ ಚೆನ್ನೈ ತೆರೆದು ನಟ ಅಂಬರೀಷ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದ ಸುಹಾಸಿನಿ ಮಣಿರತ್ನಂ ಅವರ ಸಲಹೆ ಮೇರೆಗೆ ಭೂಮಿಕ ಟ್ರಸ್ಟ್ ಗೆ 1 ಕೋಟಿ ರುಪಾಯಿ ಚೆಕ್ ನೀಡಿದ್ದಾರೆ.
ಚೆನ್ನೈನಲ್ಲಿ ಜಲಪ್ರವಾಹ ಸಂಭವಿಸಿದ ದಿನದಿಂದ ಸಂತ್ರಸ್ತರಿಗೆ ಭೂಮಿಕ ಟ್ರಸ್ಟ್ ಆಹಾರ ಹಾಗೂ ಬಟ್ಟೆಬರೆಗಳನ್ನು ನೀಡುತ್ತಾ ಬಂದಿರುವುದರಿಂದ ಈ ಟ್ರಸ್ಟ್ ಗೆ ದೇಣಿಗೆ ನೀಡುವಂತೆ ಸುಹಾಸಿನಿ ಸೂಚಿಸಿದ್ದರು.
ಇತ್ತೀಚೆಗಷ್ಟೇ ಶಾರೂಕ್ ಖಾನ್ ಅಭಿನಯದ ದಿಲ್ವಾಲೆ ಚಿತ್ರ ತಂಡ 1 ಕೋಟಿ ರುಪಾಯಿ ಪರಿಹಾರ ನೀಡಿತ್ತು.