ಭಾರತೀಯ ಸಂಗೀತದ ಸನ್ನಿವೇಶ ಬದಲಿಸಿದ ರಹಮಾನ್: ವಿಶಾಲ್ ಭಾರಾದ್ವಾಜ್

ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಭಾರದ್ವಾಜ್,
ಸಂಗೀತ ನಿರ್ದೇಶಕ ಎ ಆರ್ ರಹಮಾನ್
ಸಂಗೀತ ನಿರ್ದೇಶಕ ಎ ಆರ್ ರಹಮಾನ್
Updated on

ಮುಂಬೈ: ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಭಾರದ್ವಾಜ್, ರಹಮಾನ್ ಭಾರತದ ಸಂಗೀತದ ಸನ್ನಿವೇಶವನ್ನು ಬದಲಿಸಿದವರು ಎಂದಿದ್ದಾರೆ.

"ಅವರು ತಮ್ಮ ಸಂಗೀತದಿಂದ ಸ್ಫೂರ್ತಿ ನೀಡುತ್ತಾರೆ. ಅವರು ಸಂಗೀತ ಕ್ಷೇತ್ರಕ್ಕೆ ಬಂದಾಗಿನ ನಂತರ ಭಾರತೀಯ ಸಂಗೀತದ ಸನ್ನಿವೇಶವೇ ಬದಲಾಗಿ ಹೋಯಿತು. 'ರೋಜಾ' ಸಿನೆಮಾದ ಸಂಗೀತ ಬಿಡುಗಡೆಯಾಗಿದ್ದು ನನಗೆ ನೆನಪಿದೆ. ಅದು ಸಂಗೀತದ ಬಗ್ಗೆ ದೇಶದ ಜನತೆಯ ದೃಷ್ಟಿಕೋನವನ್ನೇ ಬದಲಿಸಿತು" ಎಂದು ಶೆಫಾಯಿ ಭೂಷಣ್ ಅವರ 'ಜಂಗಿ' ಸಂಗೀತ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಆ ಕಾರ್ಯಕ್ರಮದಲ್ಲಿ ರಹಮಾನ್ ಕೂಡ ಭಾಗಿಯಾಗಿದ್ದರು.

'ರೋಜ' ಸಿನೆಮಾದಿಂದ ತಮ್ಮ ಸಂಗೀತ ನಿರ್ದೇಶನದ ವೃತ್ತಿ ಜೀವನ ಆರಂಭಿಸಿದ್ದ ರಹಮಾನ್ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವುದಲ್ಲದೆ ಆಸ್ಕರ್ ಪ್ರಶಸ್ತಿ ವಿಜೇತರು ಕೂಡ.

ಭಾರದ್ವಾಜ್ ಕೂಡ 'ಜಂಗಿ'ಯಲ್ಲಿ ಮೊದಲ ಬಾರಿಗೆ ಗಾಯಕರಾಗಿ ಕೂಡ ಹೊರಹೊಮ್ಮಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com