
ನವದೆಹಲಿ: ಅಮೇರಿಕಾ ಧಾರಾವಾಹಿ 'ಕ್ವಾಂಟಿಕೋ'ಗಾಗಿ ಸುದೀರ್ಘ ಕಾಲದವರೆಗೆ ದೇಶದಿಂದ ದೂರ ಉಳಿದಿದ್ದ ನಟಿ ಪ್ರಿಯಾಂಕ ಚೋಪ್ರಾ ಮನೆಗೆ ಮರಳಿದ್ದಾರೆ.
ಅಮೇರಿಕಾದ ಮಾಂಟ್ರೀಯಲ್ ನಲ್ಲಿ 'ಕ್ವಾಂಟಿಕೋ' ಚಿತ್ರೀಕರಣದಲ್ಲಿ ನಿರತರಾಗಿದ್ದ ೩೩ ವರ್ಷದ ನಟಿ ಟ್ವಿಟ್ಟರ್ ನಲ್ಲಿ "ಮನೆಗೆ ಹಿಂದಿರುಗಲು ಎಷ್ಟು ಖುಷಿಯಾಗುತ್ತಿದೆ. ಹೃದಯವಿರುವಲ್ಲಿಯೇ ಮನೆ. ನಾನು ಮನೆಗೆ ಹಿಂದಿರುಗಿದ್ದೇನೆ.. #ಮುಂಬೈ" ಎಂದು ಬರೆದಿದ್ದಾರೆ.
ಎಬಿಸಿ ಸೀರಿಸ್ ನಿರ್ಮಿಸಿದ ಈ ಧಾರಾವಾಹಿಯಲ್ಲಿ ಪ್ರಿಯಾಂಕ ಎಫ್ ಬಿ ಐ ಏಜೆಂಟ್ ಪಾತ್ರ ನಿರ್ವಹಿಸಿದ್ದರು ಹಾಗೂ ಇವರ ಅಭಿನಯಕ್ಕೆ ಜಾಗತಿಕವಾಗಿ ಪ್ರಶಂಸೆ ವ್ಯಕ್ತವಾಗಿತ್ತು.
'ಮೇರಿ ಕೋಮ್' ನಟಿ ಸದ್ಯಕ್ಕೆ ಬಿಡುಗಡೆಯಾಗಿರುವ ತಮ್ಮ ಚಿತ್ರ 'ಬಾಜಿರಾವ್ ಮಸ್ತಾನಿ' ಸಿನೆಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ನಟಿಸಿರುವ ಈ ಚಿತ್ರವನ್ನು ಸಂಜಯ್ ಲೀಲಾ ಭನ್ಸಾಲಿ ನಿರ್ದೇಶಿಸಿದ್ದಾರೆ.
Advertisement