
ನವದೆಹಲಿ: 'ಜೈ ಗಂಗಾಜಲ್' ಸಿನೆಮಾದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಕ್ಷಮಾಪಣೆ ನೀಡಲಾಗದಷ್ಟು ದುಷ್ಟ ಎಂದಿದ್ದಾರೆ.
ಪ್ರಕಾಶ್ ಜಾ ನಿರ್ದೇಶನದ ಈ ಸಿನೆಮಾದ ಟ್ರೇಲರ್ ಬಿಡುಗಡೆಯ ವೇಳೆಯಲ್ಲಿ ೩೩ ವರ್ಷದ ನಟಿ "ಬಾಲಾಪರಾಧಿಯ ಬಿಡುಗಡೆಯನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಪ್ರಕರಣ ಎಷ್ಟು ದುಷ್ಟತನದಿಂದ ಕೂಡಿತ್ತೆಂದರೆ ಕ್ಷಮಾಪಣೆಗೆ ಅವಕಾಶವಿಲ್ಲ" ಎಂದಿದ್ದಾರೆ.
"ನಾನು ಕಾನೂನು ಗೌರವಿಸುವ ನಾಗರಿಕ ವ್ಯಕ್ತಿ ಆದುದರಿಂದ ಕಾನೂನಿನ ಜೊತೆಗಿರುತ್ತೇನೆ ಆದರೆ ಈ ಪ್ರಕರಣದಲ್ಲಿ ಕ್ಷಮಾಪಣೆ ಒಪ್ಪಿಕೊಳ್ಳುವುದು ಕಷ್ಟ" ಎಂದಿದ್ದಾರೆ ಪ್ರಿಯಾಂಕ.
ಅಮೆರಿಕಾದ ಧಾರಾವಾಹಿ 'ಕ್ವಾಂಟಿಕೋ' ಚಿತ್ರೀಕರಣ ಮುಗಿಸಿ ನಟಿ ಮುಂಬೈಗೆ ಹಿಂದಿರುಗಿದ್ದಾರೆ.
Advertisement