'ಬದ್ಲಾಪುರ್' ನನ್ನ ಅತಿ ಕಡಿಮೆ ಬಜೆಟ್ ಚಲನಚಿತ್ರ: ವರುಣ್ ಧವನ್

ತಮ್ಮ ಮುಂಬರುತ್ತಿರುವ ಸಿನೆಮಾ 'ಬದ್ಲಾಪುರ್' ಸಿನೆಮಾ ತಮ್ಮ ಅತಿ ಕಡಿಮೆ ಬಜೆಟ್ ನ ಚಲನಚಿತ್ರ ಎಂದಿದ್ದಾರೆ
ಬದ್ಲಾಪುರ್ ಸಿನೆಮಾದಲ್ಲಿ ವರುಣ್ ಧವನ್
ಬದ್ಲಾಪುರ್ ಸಿನೆಮಾದಲ್ಲಿ ವರುಣ್ ಧವನ್

ಮುಂಬೈ: ತಮ್ಮ ಮುಂಬರುತ್ತಿರುವ ಸಿನೆಮಾ 'ಬದ್ಲಾಪುರ್' ಸಿನೆಮಾ ತಮ್ಮ ಅತಿ ಕಡಿಮೆ ಬಜೆಟ್ ನ ಚಲನಚಿತ್ರ ಎಂದಿದ್ದಾರೆ ನಟ ವರುಣ್ ಧವನ್.

"ಮಾಧ್ಯಮದ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಗಿದೆ. ಮಾಧ್ಯಮ ಸಿನೆಮಾವನ್ನು ಬಹಳಷ್ಟು ಬೆಂಬಲಿಸಿದೆ. ಇದು ೨೫ ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಲನಚಿತ್ರ. ನನ್ನ ಚಿತ್ರಗಳಲ್ಲಿ ಅತಿ ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ, ಈ ಚಲನಚಿತ್ರಕ್ಕೆ ಮೀಡಿಯಾ ಬಹಳಷ್ಟು ಬೆಂಬಲ ನೀಡಿದೆ" ಎಂದಿದ್ದಾರೆ ವರುಣ್. ಈ ಹಿಂದೆ ದೊಡ್ಡ ಬ್ಯಾನರ್ ಚಿತ್ರಗಳಾದ 'ಸ್ಟೂಡೆಂಟ್ ಆಫ್ ಇಯರ್' ಮತ್ತು 'ಹಮ್ಟಿ ಶರ್ಮಾ ಕಿ ದುಲ್ಹನಿಯಾ' ಚಿತ್ರಗಳಲ್ಲಿ ವರುಣ್ ನಟಿಸಿದ್ದರು.

ಶ್ರೀರಾಮ್ ರಾಘವನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ಹೂಮಾ ಕುರೇಷಿ ಕೂಡ ನಟಿಸಿದ್ದಾರೆ.

'ಚಾಕಲೇಟ್ ಬಾಯ್' ಛಾಯೆಯಲ್ಲೇ ನಟಿಸುತ್ತಿದ್ದ ವರುಣ್ ಫೆಬ್ರವರಿ ೨೦ ರಂದು ಬಿಡುಗಡೆಯಾಗುತ್ತಿರುವ ಈ ಸಿನೆಮಾದ ಹೊಸ ರೀತಿಯ ಪಾತ್ರಕ್ಕೆ ಒಗ್ಗಿಕೊಳ್ಳುವುದು ಕಷ್ಟದ ಕೆಲಸವಾಗಿತ್ತು ಎನ್ನುತ್ತಾರೆ.

"ಈ ಸಿನೆಮಾಗೆ ಬಹಳಷ್ಟು ಸಿದ್ಧತೆ ಬೇಕಾಗಿತ್ತು. ಶ್ರೀರಾಮ್ ಎಲ್ಲವನ್ನೂ ಉತ್ತಮ ರೀತಿಯಲ್ಲಿ ಯೋಜಿಸಿದ್ದರು. ಇಗತ್ಪುರಿಯಲ್ಲಿ ಚಿತ್ರೀಕರಣ ಮಾಡಿದೆವು. ನಾನು ನಿಜ ಜೀವನದಲ್ಲಿ ಈ ರೀತಿಯ ಮನುಷ್ಯನಲ್ಲ, ಆದುದರಿಂದ ಈ ಪಾತ್ರಕ್ಕೆ ಹೊಂದಿಕೊಳ್ಳುವುದು ಬಹಳ ಕಷ್ಟವಾಯಿತು, ಆದರೆ ಶ್ರೀರಾಮ್ ನನಗೆ ಬಹಳ ಸಹಾಯ ಮಾಡಿದರು" ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com