ಬಾಲಗಂಗಾಧರ್ ತಿಲಕ್ ಪಾತ್ರದಲ್ಲಿ ಓಂಪುರಿ
ಮುಂಬೈ: ನಟ ಓಂಪುರಿ, ಮುಂಬರುತ್ತಿರುವ 'ಚಾಪೇಕರ್ ಬ್ರದರ್ಸ್' ಸಿನೆಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಪಾತ್ರವನ್ನು ಪೋಷಿಸಲಿದ್ದಾರೆ.
"ಇಂತಹ ಧೀಮಂತನ ಪಾತ್ರವನ್ನು ಪೋಷಿಸುವುದು ಗೌರವ. ನನ್ನ ಶೋಧನೆಯ ಮೂಲಕ ತಿಲಕ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇನೆ. ಅಂತರ್ಜಾಲದಲ್ಲಿ ಎಷ್ಟು ಮಾಹಿತಿ ಇದೆ ಎಂದರೆ ಅವರನ್ನು ತೆರೆಯ ಮೇಲೆ ತರಲು ಸುಲಭವಾಗುತ್ತಿದೆ" ಎಂದಿದ್ದಾರೆ ಓಂ.
"ಚಿತ್ರತಂಡ ಕೂಡ ತಿಲಕ್ ಬಗ್ಗೆ ಹೆಚ್ಚಿನ ಶೋಧನೆ ನಡೆಸಿದೆ. ಅವರು ಕೂಡ ಈ ಪಾತ್ರದ ಪೋಷಣೆಯ ಸೂಕ್ಷ್ಮತೆಯನ್ನು ನನಗೆ ವಿವರಿಸುತ್ತಾರೆ. ಇಷ್ಟೊಂದು ಹಿನ್ನಲೆ ಮಾಹಿತಿ ಇರುವಾಗ ಸುಲಭವಾಗಿ ಈ ಪಾತ್ರವನ್ನು ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ ನನಗಿದೆ" ಎಂದಿದ್ದಾರೆ.
೧೮೯೭ ರಲ್ಲಿ ಸ್ವಾತಂತ್ರ್ಯ ಚಳುವಳಿಗೆ ಚಾಪೇಕರ್ ಸಹೋದರರು ಕೊಟ್ಟ ಕೊಡುಗೆಯನ್ನು ಈ ಚಲನಚಿತ್ರ ದಾಖಲಿಸಲಿದೆ.
ಮಿಲಾನ್ ಅಜ್ಮೇರ ನಿರ್ದೇಶನದ ಈ ಚಿತ್ರದ ಕಥೆ-ಸಂಭಾಷಣೆ ಧೀರಜ್ ಮಿಶ್ರಾ ಅವರದ್ದು. ಗಿರಿವರ ನಿರ್ಮಾಣ ಸಂಸ್ಥೆಯ ಘನಶ್ಯಾಂ ಈ ಸಿನೆಮಾ ನಿರ್ಮಿಸುತ್ತಿದ್ದು ಗುಜರಾತ್ ನ ವಡೋದರಾದಲ್ಲಿ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ