ಡಿಡಿಎಲ್ ಜೆ ಲಾಸ್ಟ್ ಶೋ!

ಡಿಡಿಎಲ್ ಜೆ! ಹೆಸರು ಕೇಳಿದರೆ ಸಾಕು, ಎಲ್ಲರ ಮನದಲ್ಲೂ ಶಾರುಖ್ ಖಾನ್ ಹಾಗೂ ಕಾಜಲ್ ಬಂದು ಹೋಗುತ್ತಾರೆ. ಈ ಸಿನಿಮಾ ಬರೋಬ್ಬರಿ 20 ವರ್ಷಗಳಿಂದ ಮುಂಬೈನ ಮರಾಠ ಮಂದಿರ್ ಪರದೆಯ ಮೇಲೆ ರಾರಾಜಿಸುತ್ತಿತ್ತು...
ಡಿಡಿಎಲ್ ಜೆ ಲಾಸ್ಟ್ ಶೋ!

ಮುಂಬೈ: ಡಿಡಿಎಲ್ ಜೆ! ಹೆಸರು ಕೇಳಿದರೆ ಸಾಕು, ಎಲ್ಲರ ಮನದಲ್ಲೂ ಶಾರುಖ್ ಖಾನ್ ಹಾಗೂ ಕಾಜಲ್ ಬಂದು ಹೋಗುತ್ತಾರೆ. ಈ ಸಿನಿಮಾ ಬರೋಬ್ಬರಿ 20 ವರ್ಷಗಳಿಂದ ಮುಂಬೈನ ಮರಾಠ ಮಂದಿರ್ ಪರದೆಯ ಮೇಲೆ ರಾರಾಜಿಸುತ್ತಿತ್ತು.

ಇದು ಗುರುವಾರ ಬೆಳಗ್ಗೆ ಕೊನೆಯ ಪ್ರದರ್ಶನ ಕಂಡಿತು. ಹೀಗೆಂದು ಚಿತ್ರ ಮಂದಿರದ ಮಾಲೀಕ ಮನೋಜ್ ದೇಸಾಯಿ ಹೇಳಿದ್ದಾರೆ. ನಾವು ಕೊನೆಯ ಪ್ರದರ್ಶನ ಏರ್ಪಡಿಸಿದಾಗ 210 ಪ್ರೇಕ್ಷಕರಿದ್ದರು. ಮೊದಲು ಈ ಚಿತ್ರ ನೋಡಲು ವಿದೇಶ ದಿಂದೆಲ್ಲಾ ಜನರು ಬರುತ್ತಿದ್ದರು. ಆದರೆ ಕ್ರಮೇಣ ಪ್ರೇಕ್ಷಕರು ಕಡಿಮೆಯಾಗಿದ್ದರಿಂದ ನಾವು ಪ್ರದರ್ಶನ ನಿಲ್ಲಿಸಿ ಹೊಸ ಚಿತ್ರಗಳಿಗೆ ಪರದೆ ಕೊಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

1996ರಲ್ಲಿ ಈ ಸಿನಿಮಾವು `ಅತ್ಯುತ್ತಮ ಚಿತ್ರ', `ಶ್ರೇಷ್ಠ ನಾಯಕ ನಟ', ಶ್ರೇಷ್ಠ ನಾಯಕ ನಟಿ', `ಉತ್ತಮ ನಿರ್ದೇಶಕ' ಸೇರಿದಂತೆ 10 ಫಿಲಂಫೇರ್ ಪ್ರಶಸ್ತಿಗಳನ್ನು ಬಾಚಿತ್ತು. ಈ ಚಿತ್ರ 1995ರ ಅಕ್ಟೋಬರ್ ನಿಂದ ಸತತವಾಗಿ 20 ವರ್ಷ ಪ್ರದರ್ಶನಗೊಂಡಿತ್ತು. ಭಾರತೀಯ ಸಿನಿಮಾದ ಇತಿಹಾಸದಲ್ಲೇ ಸತತ 20 ವರ್ಷ ಪ್ರದರ್ಶನಗೊಂಡ ಏಕೈಕ ಚಿತ್ರ ವೆಂಬ ದಾಖಲೆ ನಿರ್ಮಿಸಿತ್ತು. ಆದಿತ್ಯ ಚೋಪ್ರಾರ ಚೊಚ್ಚಲ ನಿರ್ದೇಶನದ ಈ ಚಿತ್ರವನ್ನು ದಿ. ಯಶ್ ಚೋಪ್ರಾ ನಿರ್ಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com