ನಾನು ಯುವಿ ಜತೆ ಡೇಟಿಂಗ್ ಮಾಡಿಲ್ಲ: ಪ್ರೀತಿ ಜಿಂಟಾ
ಮುಂಬೈ: ಕ್ರಿಕೆಟಿಗರ ಜತೆ ಬಾಲಿವುಡ್ ತಾರೆಯರ ಸಂಬಂಧ ಯಾವತ್ತೂ ಸುದ್ದಿ ಮಾಡಿದ್ದೇ ಹೆಚ್ಚು. ಆ ಸಂಬಂಧ ಅದೆಷ್ಟು ದಿನವಿರುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಬಾಲಿವುಡ್‌ಗೂ ಕ್ರಿಕೆಟ್‌ಗೂ ಪ್ರೀತಿಯ ನಂಟು ಇದ್ದೇ ಇರುತ್ತದೆ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾದಾಗ ಬಾಲಿವುಡ್‌ನ ಗುಳಿಕೆನ್ನೆಯ ನಟಿ ಪ್ರೀತಿ ಜಿಂಟಾ ಹೆಸರು ಟೀಂ ಇಂಡಿಯಾದ ಆಲ್‌ರೌಂಡರ್ ಯುವರಾಜ್ ಸಿಂಗ್ ಜತೆಗೆ ಕೇಳಿ ಬಂದಿತ್ತು. ಇವರಿಬ್ಬರೂ ಜತೆಯಾಗಿ ಕಾಣಿಸಿಕೊಂಡು ಫೋಟೋಗಳಿಗೆ ಪೋಸ್ ಕೊಟ್ಟು ಸುದ್ದಿಯಾಗಿತ್ತು. ಪ್ರೀತಿ ಜಿಂಟಾ ಅವರ ಕಿಂಗ್ಸ್ ಇಲೆವೆನ್ ಪಂಜಾಬ್ ಟೀಂನಲ್ಲಿ ಯುವರಾಜ್ ಐಪಿಎಲ್ ಆಡುತ್ತಿದ್ದಾಗ ಪ್ರೀತಿ ಮತ್ತು ಯುವಿ ತುಂಬಾ ಆಪ್ತವಾಗಿಯೇ ಕಾಣಿಸಿಕೊಂಡಿದ್ದರು.
ಆದರೆ ಕೆಲ ದಿನಗಳ ಹಿಂದೆಯಷ್ಟೇ ನಡೆದ ಐಪಿಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಯುವರಾಜ್ ಸಿಂಗ್‌ನ್ನು ಡೇರ್‌ಡೆವಿಲ್ ತಂಡ 16 ಕೋಟಿ ರು. ಗೆ ಖರೀದಿಸಿ ದಾಖಲೆ ಸೃಷ್ಟಿಸಿತ್ತು. ಅದೇ ವೇಳೆ ಪ್ರೀತಿ ಯುವರಾಜ್‌ನ್ನು ತನ್ನ ತಂಡಕ್ಕೆ ಖರೀದಿಸುವಲ್ಲಿ ವಿಫಲಳಾಗಿದ್ದು ಕೂಡಾ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಆದಾಗ್ಯೂ, ಪ್ರೀತಿ -ನೆಸ್‌ವಾಡಿಯಾ ಜತೆಗಿನ ಸಂಬಂಧ ಮುರಿಯಲು ಕೂಡಾ ಯುವಿ ಜತೆಗಿನ ಈ ಗೆಳೆತನವೇ ಕಾರಣವಾಗಿರಬಹುದಾ? ಎಂದು ಮಾಧ್ಯಮಗಳು ಬರೆದಿದ್ದವು. ಇಂಥಾ ಸುದ್ದಿಗಳನ್ನು ನೋಡಿ ಕೋಪಗೊಂಡ ಪ್ರೀತಿ ಟ್ವೀಟರ್ ಮೂಲಕ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರೀತಿ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದು ಹೀಗೆ
ಪ್ರೀತಿಯ ಸುದ್ದಿ ಮಾಧ್ಯಮ (ವಿಶೇಷವಾಗಿ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್), ನಾನು ಯುವರಾಜ್ ಸಿಂಗ್‌ನ್ನು ಡೇಟಿಂಗ್ ಮಾಡಿಲ್ಲ, ಮಾಡಲು ಉದ್ದೇಶಿಸಿದ್ದೂ ಇಲ್ಲ ಎಂದು ನಿಮಗೆ ಅದೆಷ್ಟು ಬಾರಿ ಹೇಳಬೇಕು?
ಇನ್ನೊಂದು ಟ್ವೀಟ್‌ನಲ್ಲಿ
ಈ ರೀತಿಯ ವಿಷಯಗಳು ಬರೀ ಸುಳ್ಳು ಮತ್ತು ಕೀಳುಮಟ್ಟದ್ದು. ನನಗೆ ಯುವರಾಜ್ ಸಿಂಗ್ ಜತೆ ಸಂಬಂಧವಿದೆ ಎಂಬುದನ್ನು ಬರೆಯುವುದನ್ನು ನಿಲ್ಲಿಸಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ