
ಮುಂಬೈ: ಬಾಲಿವುಡ್ ನಟ ಅಮಿರ್ ಖಾನ್ ಚಿತ್ರ ನಿರ್ಮಾಣ ಸಂಸ್ಥೆಯು ತಮ್ಮ ಮುಂಬರುವ ಹೊಸ ಚಿತ್ರಕ್ಕಾಗಿ ಹೊಸಮುಖ ನಟಿಯೊಬ್ಬಳಿಗಾಗಿ ಹುಡುಕಾಟ ನಡೆಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅಮಿರ್ ಖಾನ್ ಚಿತ್ರ ನಿರ್ಮಾಣ ಸಂಸ್ಥೆಯ ಸದಸ್ಯರಾಗಿರುವ ಅದ್ವೈತ್ ಚಂದನ್ ಅವರು, ಸಂಸ್ಥೆಯಿಂದ ಹೊಸ ಚಿತ್ರವೊಂದು ನಿರ್ಮಾಣವಾಗುತ್ತಿದ್ದು, ಚಿತ್ರಕ್ಕೆ ಹಾಡು ಹೇಳುವ ಹಾಗೂ ನಟನೆ ಮಾಡುವ ಯುವ ಹಾಗೂ ಹೊಸ ಮುಖ ನಟಿಯೊಬ್ಬರು ಬೇಕಿದ್ದು, ವಯಸ್ಸಿನ ಮಿತಿ 12-17ರ ಒಳಗಿರಬೇಕೆಂದು ಹೇಳಿದ್ದಾರೆ. ಹಾಡು ಹೇಳುವ ಹಾಗೂ ನಟನೆ ಮಾಡುವ ಕಲೆಯಿರುವ ಆಸಕ್ತರು ಹಿಂದಿ ಹಾಡೊಂದನ್ನು ಹಾಡಿ ಅದರ ವೀಡೀಯೋವನ್ನು ರೆಕಾರ್ಡ್ ಮಾಡಿ casting@akpfilms.com ವಿಳಾಸಕ್ಕೆ ಇಮೇಲ್ ಮಾಡುವಂತೆ ತಿಳಿಸಿದ್ದಾರೆ.
ಅದ್ವೈತ್ ಚಂದನ್ ಟ್ವೀಟ್ ಮಾಡಿರುವ ಪೋಸ್ಟ್ ನಲ್ಲಿ ಚಿತ್ರಕ್ಕೆ ಅವಶ್ಯವಿರುವ ಎಲ್ಲಾ ಅವಶ್ಯಕಗಳನ್ನು ತಿಳಿಸಿದ್ದು, ಹೊಸ ಮುಖ ಪ್ರತಿಭೆ ಹುಡುಕಲು ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಅದ್ವೈತ್ ಚಂದನ್ ಈ ಮೊದಲು ಅಮಿರ್ ಖಾನ್ ಅವರು ಪರ್ಸನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅಮಿರ್ ಖಾನ್ ಅವರ ಪತ್ನಿ ಕಿರಣ್ ರಾವ್ ಅವರು ಹೊಸ ಚಿತ್ರವೊಂದಕ್ಕೆ ಬಂಡವಾಳ ಹೂಡುವ ಮೂಲಕ ಅದ್ವೈತ್ ಅವರನ್ನು ಹೊಸ ನಿರ್ದೇಶಕನಾಗಿ ಬಾಲಿವುಡ್ ಗೆ ಪರಿಚಯಿಸಲಿದ್ದಾರೆ. ಅದ್ವೈತ್ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ.
Advertisement