
ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ಬಜರಂಗಿ ಬಾಯಿಜಾನ್ ಚಿತ್ರದಲ್ಲಿ ಹೊಸದೊಂದು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಇನ್ನೆಂದು ಕಾಣಸಿಕೊಳ್ಳದ ಹೊಸ ಅವತಾರದಲ್ಲಿ ಬಜರಂಗಿ ಬಾಯಿಜಾನ್ ಚಿತ್ರದಲ್ಲಿ ಕಾಣಸಿಗಲಿದ್ದಾರೆ. ಅದು ಯಾವುದಂತಿರ ಮುಸ್ಲಿಂ ಮಹಿಳೆಯರು ಧಾರ್ಮಿಕವಾಗಿ ಬಳಸುವ ಬುರ್ಖಾವನ್ನು ಸಲ್ಮಾನ್ ಖಾನ್ ತೊಡಲಿದ್ದು, ನವಾಜುದ್ದೀನ್ ಸಿದ್ದಿಕ್ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪಾಕಿಸ್ತಾನದಲ್ಲಿ ಟಿವಿ ವರದಿಗಾರನ ಪಾತ್ರದಲ್ಲಿ ಸಿದ್ದಿಕ್ ನಟಿಸುತ್ತಿದ್ದು, ಪಾಕಿಸ್ತಾನದಿಂದ ಭಾರತಕ್ಕೆ ಪೋಷಕರೊಂದಿಗೆ ಬರುವ ಬಾಲಕಿ ತಾನು ಹೋಗಬೇಕಿದ್ದ ರೈಲನ್ನು ಮಿಸ್ ಮಾಡುತ್ತಾಳೆ. ಹಾಗ ಸಲ್ಮಾನ್ ಖಾನ್ ಬಾಲಕಿಯನ್ನು ಪುನಃ ಪಾಕಿಸ್ತಾನಕ್ಕೆ ಬಿಟ್ಟು ಬರುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಚಿತ್ರದಲ್ಲಿ ಹಿಂದೂ ಪಾತ್ರದಾರಿಯಾಗಿ ಕಾಣಿಸಿಕೊಳ್ಳುವ ಸಲ್ಮಾನ್ ಖಾನ್ ಭಾರತ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ ವೇಳೆ ಈ ಪೋಷಾಕನ್ನು ಧರಿಸುತ್ತಾರೆ.
Advertisement