
ಬಿಡುಗಡೆಯಾದ ೧೦ ದಿನಗಳ ನಂತರ ೨೦೧೧ರ 'ತನು ವೆಡ್ಸ್ ಮನು' ಸಿನೆಮಾದ ಮುಂದಿನ ಅವತಾರ 'ತನು ವೆಡ್ಸ್ ಮನು ರಿಟರ್ನ್ಸ್' ಗಲ್ಲಾ ಪೆಟ್ಟಿಯಲ್ಲಿ ಅತಿ ಯಶಸ್ಸಿನ ಸಿನೆಮ ಎಂದು ಪರಿಗಣಿಸಲಾಗಿದೆ. ೨೦೧೫ರಲ್ಲಿ ೧೦೦ ಕೋಟಿ ಗಳಿಕೆ ದಾಟಿದ ಮೊದಲ ಸಿನೆಮಾ ಇದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
೩೦ ಕೋಟಿಯ ಸಾಧಾರಣ ಬಜೆಟ್ ನಲ್ಲಿ ನಿರ್ಮಿಸಲಾಗಿರುವ ಈ ಸಿನೆಮಾ ಬಿಡುಗಡೆಯಾದ ೧೦ ದಿನಗಳ ಅಂತ್ಯಕ್ಕೆ ೧೦೩.೪೭ ಕೋಟಿ ಗಳಿಸಿದೆ. ಈ ಬಗೆಯ ಅತಿ ಹೆಚ್ಚಿನ ಗಳಿಕೆ ಕಾಣುವ ಸಿನೆಮಾಗಳು ಬಾಲಿವುಡ್ ನಲ್ಲಿ ಸರ್ವೇ ಸಾಮಾನ್ಯವೇನಲ್ಲ.
ಕಂಗನಾ ರನೌತ್, ಆರ್ ಮಾಧವನ್, ಜಿಮ್ಮಿ ಶೇರ್ಗಿಲ್ ಮತ್ತು ದೀಪಕ್ ದೋಬ್ರಿಯಾಲ್ ನಟನೆಯ ಈ ಸಿನೆಮಾ ತನ್ನ ಸ್ಕ್ರಿಪ್ಟ್ ನ ಗಟ್ಟಿತನ ಹಾಗೂ ಪಾತ್ರವರ್ಗದ ನಟನೆಗಾಗಿ ವಿಮರ್ಶಕರು ಹಾಗು ಸಾಮಾನ್ಯ ಪ್ರೇಕ್ಷಕರು ಇಬ್ಬರಿಂದಲೂ ಒಳ್ಳೆಯ ಪ್ರಶಂಸೆ ಪಡೆದಿದೆ. ಸಿನೆಮಾ ಮಾರುಕಟ್ಟೆ ವಿಶ್ಲೇಷಕ ಹಾಗು ಸಿನೆಮಾ ವಿಮರ್ಶಕ ತರಂ ಆದರ್ಶ್ ಸಿನೆಮಾದ ಬಾಕ್ಸ್ ಆಫಿಸ್ ಗಳಿಕೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
Advertisement