
ಬಾಲಿವುಡ್‍ನ ಸ್ಪೂರದ್ರೂಪಿ ನಟ ಹೃತಿಕ್ ರೋಷನ್ ಕನ್ನಡತಿಯೊಬ್ಬಳ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದು ಬಾಲಿವುಡ್ ಲೇಟೆಸ್ಟ್ ಬಿಸಿಬಿಸಿ ಗಾಸಿಪ್.
ಹೃತಿಕ್‍ಗೇನು, ಯಾರು ಬೇಕಾದರೂ ಬೀಳುತ್ತಾರೆ. ಆದರೆ ಹೃತಿಕ್ ಯಾರಿಗಾದರೂ ಬೀಳಬೇಕಲ್ಲ. ಹಾಗೆ ಹೃತಿಕ್ ಕಂಗಳು ಬಿದ್ದದ್ದು ಪೂಜಾ ಹೆಗ್ಡೆ ಎಂಬ ನವ ನಟಿಯ ಮೇಲೆ. ಈಕೆ ಕನ್ನಡ ಮೂಲದವಳು ನಿಜ. ಆದರೆ ಇನ್ನೂ ಯಾವುದೇ ಕನ್ನಡ ಚಿತ್ರದಲ್ಲಿ ಆಕೆಯ ಮುಖ ಕಾಣಿಸಿಲ್ಲ.
ಅಶುತೋಷ್ ಗೋವಾರಿಕರ್ ಅವರ ನಿರ್ದೇಶನದ ಮೊಹೆಂಜೋದಾರೋ ಚಿತ್ರದಲ್ಲಿ ಹೃತಿಕ್ ಜೋಡಿಯಾಗಿ ಮಂಗಳೂರು ಮೂಲದ ಪೂಜಾ ನಟಿಸಿದ್ದಾರೆ.
ಬಾಲ್ಯದ ಗೆಳತಿ ಸೂಸನ್ ಜತೆಗಿನ ಹಲವು ವರ್ಷಗಳ ದಾಂಪತ್ಯದ ನಂತರ ಹೃತಿಕ್ ಇತ್ತೀಚೆಗೆ ವಿವಾಹ ವಿಚ್ಛೇದನ ನೀಡಿದ್ದರು. ಇದಾದ ಬಳಿಕ ಮೆದುಳಿನ ಶಸ್ತ್ರಚಿಕಿತ್ಸೆ, ಎಡಬಿಡದೆ ಶೂಟಿಂಗ್ ಎಂದೆಲ್ಲ ಬ್ಯುಸಿಯಾಗಿರುವ ಹೃತಿಕ್ ಬಾಳಿನಲ್ಲಿ ಪೂಜಾ ರೂಪದಲ್ಲಿ ಹೊಸ ರೋಮಾಂಚನದ ತಂಗಾಳಿ ಬೀಸಿದೆ.
ಭುಜ್, ಮುಂಬೈಗಳಲ್ಲಿ ನಡೆಯುತ್ತಿರುವ ಚಿತ್ರೀಕರಣದ ಮಧ್ಯೆ ಹೃತಿಕ್- ಪೂಜಾ ನಡುವೆ ಈ ತಂಗಾಳಿ ಓಡಾಡಿದೆ.
Advertisement