
ಮುಂಬೈ: 'ಟೈಂಪಾಸ್' ಪ್ರಣಯ ಎನ್ನಲಾಗುವುದರ ಮೇಲೆ ನನಗೆ ಹೆಚ್ಚು ನಂಬಿಕೆ ಎಂದಿದ್ದಾರೆ ಸದ್ಯದಲ್ಲೇ ಬಿಡುಗಡೆ ಕಾಣಲಿರುವ 'ಕಟ್ಟಿ ಬಟ್ಟಿ' ಸಿನೆಮಾದಲ್ಲಿ ಕಾಣಿಸಿಕೊಳ್ಳಲಿರುವ ಕ್ವೀನ್ ನಾಯಕಿ ಕಂಗನಾ ರನೌತ್.
ಪ್ರೀತಿಯಲ್ಲಿ ನಂಬಿಕೆಯಿಡದೆ ಲಿವ್ಇನ್ ಸಂಬಂಧಗಳನ್ನು ಆಯ್ಕೆ ಮಾಡಿಕೊಳ್ಳುವ ಕಂಗನಾ ಪಾತ್ರವನ್ನು ಟ್ರೇಲರ್ ತೋರಿಸುತ್ತದೆ. ಸಿನೆಮಾದಲ್ಲಿ ತಮ್ಮ ಜೊತೆ ನಟಿಸಿರುವ ಇಮ್ರಾನ್ ಖಾನ್ ಜೊತೆ 'ಟೈಂಪಾಸ್' ಸಂಬಂಧ ಹೊಂದಲು ತಾನು ಸಿದ್ಧಳಾಗಿರುವುದಾಗಿಯೂ ಟ್ರೇಲರ್ ಹೇಳುತ್ತದೆ.
"ನೀವು ಡೇಟ್ ಮಾಡುವಾಗ ಮದುವೆ ನಿಮ್ಮ ಆದ್ಯತೆಯಾಗಿರುವುದಿಲ್ಲ ಏಕೆಂದರೆ ಸಂಬಂಧದ ಅರ್ಥ ಇನ್ನೂ ಹೊಳೆದಿರುವುದಿಲ್ಲ. ಆದರೆ ನಾನು 'ಟೈಂಪಾಸ್' ಪ್ರಣಯಕ್ಕೆ ತೆರೆದುಕೊಳ್ಳುತ್ತೇನೆ" ಎಂದು 'ಕಟ್ಟಿ ಬಟ್ಟಿ' ಸಿನೆಮಾ ಟ್ರೇಲರ್ ವೇಳೆ ಕಂಗನಾ ವರದಿಗಾರರಿಗೆ ತಿಳಿಸಿದ್ದಾರೆ.
ಲಿವ್-ಇನ್ ಸಂಬಂಧದ ಸಂಗತಿಗೂ ನಾನು ತೆರೆದುಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನಿಖಿಲ್ ಅಡ್ವಾನಿಯವರ ರೋಮ್ಯಾಂಟಿಕ್ ಹಾಸ್ಯ ಸಿನೆಮಾ ಕಟ್ಟಿ ಬಟ್ಟಿ ಸಿನೆಮಾದ ಬಗ್ಗೆಯೂ ಉತ್ತೇಜಿತಳಾಗಿರುವ ಕಂಗನಾ "ಇದು ನನ್ನ ಮತ್ತು ಇಮ್ರಾನ್ ನಡುವಿನ ಪ್ರೇಮ ಕಥೆ. ಇಬ್ಬರಿಗೂ ಸಮನಾದ ಪಾತ್ರವಿದೆ. ನನಗಿಂತಲೂ ಇಮ್ರಾನ್ ಅವರಿಗೆ ಹೆಚ್ಚಿನ ಸ್ಕ್ರೀನ್ ಸಮಯವಿದೆ ಆದರೆ ಇದು ಯಾವ ಪಾತ್ರದ ಪ್ರಾಮುಖ್ಯತೆಯನ್ನು ಕುಂದಿಸುವುದಿಲ್ಲ" ಎಂದಿದ್ದಾರೆ ಕಂಗನಾ.
Advertisement