ಭೂಮಿ ತೂಕದ ನಟಿ!
ಕಳೆದ ಶುಕ್ರವಾರ ತೆರೆಕಂಡಿರುವ ಯಶ್ ರಾಜ್ ಬ್ಯಾನರ್‍ನ ಹೊಸ ಚಿತ್ರ `ದಮ್ ಲಗಾಕೆ ಹೈಶಾ' ಚಿತ್ರದ ಹೈಲೈಟೇ ಹೀರೋಯಿನ್ ಭೂಮಿ ಪೆಡ್ನೇಕರ್. ಬಾಲಿವುಡ್‍ನಲ್ಲಿ ನೀವು ಈ ಮಾದರಿಯ ಹೀರೋಯಿನ್ನನ್ನು ಕಂಡಿರಲು ಸಾಧ್ಯವೇ ಇಲ್ಲ.
ದಕ್ಷಿಣಭಾರತೀಯ ಚಿತ್ರಗಳಲ್ಲೂ ನೀವು ಇತ್ತೀಚಿನ ದಿನಗಳಲ್ಲಿ ಈ ರೀತಿ ದಪ್ಪಗಿನ ಹೀರೋಯಿನ್ ನೋಡಿರಲಾರಿರಿ. ಮಲಯಾಳಂ ವಯಸ್ಕರ ಚಿತ್ರ ಅಥವಾ ಅಂದಿನ ಕಾಲದ ನಾಯಕಿಯರಾದ ಸರಿತಾ, ಜಯಂತಿ ಮುಂತಾದವರನ್ನು ನೆನಪಿಸುವ ಭೂಮಿ ಪೆಡ್ನೇಕರ್ ಬಗ್ಗೆ ಕೆಲವು ವಿಶೇಷಗಳು ಇಲ್ಲಿವೆ. ಈಕೆ ಯಶ್ ರಾಜ್ ಬ್ಯಾನರ್‍ನಲ್ಲಿ ಮೂರು ಚಿತ್ರಗಳಲ್ಲಿ ನಟಿಸಲು ಸಹಿ ಮಾಡಿದ್ದಾಳೆ!
ಈ ಚಿತ್ರದಲ್ಲಿ ನಟಿಸೋ ಮೊದಲು ಭೂಮಿ, ಯಶ್‍ರಾಜ್ ಫಿಲಮ್ಸ್ ನ ತಾರಾಬಳಗ ಆಯ್ಕೆ ಮಾಡುವಲ್ಲಿ ಸಹಾಯಕಿಯಾಗಿದ್ದಳು. ತನಗೆ ನಟನೆಯ ಆಫರ್ ಬರುತ್ತದೆಂದು ಕನಸಲ್ಲೂ ಆಕೆ ಎಣಿಸಿರಲಿಲ್ಲ. ಆಡಿಷನ್ನಿಗೆ ಕರೆದಾಗ, ಇತರರಿಗೆ ಒಂದು ಸ್ಯಾಂಪಲ್ ಇದ್ದಂತಿರಲಿ ಎಂದು ಆಡಿಷನ್ ಮಾಡ್ತಿದಾರೆ ಅಂದ್ಕೊಂಡಿದ್ಳಂತೆ! ಮೂವತ್ತರ ಹರೆಯದ ಈಕೆಗೆ ರಾಜಕೀಯ ನಾಯಕಿಯಾಗುವ ಗುರಿಯಿದೆಯಂತೆ. ಯಶ್‍ರಾಜ್ ಕುಟುಂಬದ ಸೊಸೆ ರಾಣಿಮುಖರ್ಜಿ ಈಕೆಯ ನಟನೆ ನೋಡಿ ಮರುಳಾಗಿದ್ದಾಳಂತೆ. ಭೂಮಿಗೆ ಸಿನಿಮಾ ಹುಚ್ಚು ಎಷ್ಟಿದೆ ಅಂದ್ರೆ ದೇಶದ್ರೋಹಿ ಚಿತ್ರವನ್ನು ಥೇಟರಿನಲ್ಲಿ ನೂರು ಸಲ ನೋಡಿದ್ದಾಳಂತೆ. ಈ ಸಿನಿಮಾಗಾಗಿ ಆಕೆ ಹದಿನೈದು ಕಿಲೋ ಹೆಚ್ಚಿಸಿಕೊಂಡಿದ್ದಳಂತೆ!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ