ಕ್ರಶ್ ಕನೆಕ್ಷನ್
ಆಲಿಯಾ ಭಟ್‍ಗೆ ಶಾಹಿದ್ ಕಪೂರ್ ಮೇಲೆ ಭಯಂಕರ ಕ್ರಶ್ ಇತ್ತಂತೆ. ಈ ವಿಷಯ ಖುದ್ದು ಆಲಿಯಾ ಪಿಂಕ್‍ವಿಲ್ಲಾ ಡಾಟ್ ಕಾಮ್ ಎಂಬ ವೆಬ್ ಸೈಟಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ.
ಚಿಕ್ಕವಳಿದ್ದಾಗ ಶಾಹಿದ್ ಕಪೂರ್ ಅಂದ್ರೆ ನನಗೆ ಹುಚ್ಚುಹಿಡಿಯೋಷ್ಟು ಇಷ್ಟವಿತ್ತು ಎಂದಿರುವ ಆಲಿಯಾ ಆ ಮೂಲಕ ತಾನೀಗ ದೊಡ್ಡವಳಾಗಿದ್ದೇನೆ ಎಂದು ಘೋಷಿಸಿದ್ದಾಳೆ. ಶಾಹಿದ್ ಕಪೂರ್‍ನ ಮೊದಲ ಚಿತ್ರ ಇಷ್ಕ್ ವಿಷ್ಕ್ ಬಂದಾಗ ಆಕೆಗೆ ಹತ್ತು ವರ್ಷ ವಯಸ್ಸು. ಆ ಸಿನಿಮಾ ಶಾಹಿದ್‍ಗೋಸ್ಕರ ಪದೇಪದೆ ನೋಡುತ್ತಿದ್ದಳಂತೆ. ಆಲಿಯಾ ಇದನ್ನೆಲ್ಲ ಹೇಳಿಕೊಂಡಿರುವುದು ಶಾಹಿದ್ ಕಪೂರ್ ಜೊತೆಗೆ ಶಾನ್‍ದಾರ್ ಚಿತ್ರದಲ್ಲಿ ನಟಿಸಿ ಬಂದ ನಂತರ. ಅಂದಿನ ಕ್ರಶ್ ಇನ್ನೂ ಇದೆಯಾ ಎಂದು ಕೇಳಿದರೆ, ಆಲಿಯಾ ಮಾತು ತಪ್ಪಿಸಿ, ಶಾಹಿದ್ ಕಪೂರ್‍ನ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡುತ್ತಾಳೆ.
ಶಾಹಿದ್‍ನ ಕೆಲಸದ ಶೈಲಿಯನ್ನು ವಿಪರೀತವಾಗಿ ಹೊಗಳುವ ಆಲಿಯಾ, ತಾನೂ ಅವನಂತೆ ಪ್ರೊಫೆಷನಲ್ ಆಗಿ ಇರೋದನ್ನ ಕಲಿಯಬೇಕು ಅನ್ನುತ್ತಾಳೆ. ಕಳೆದ ವರ್ಷ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತಿ ಹೊಂದಿದ್ದ ಆಲಿಯಾ ಈ ವರ್ಷ ಶಾನ್‍ದಾರ್ ಚಿತ್ರದ ಮೇಲೆ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾಳೆ. ಚಳಿಪ್ರದೇಶದಲ್ಲಿ ಮಂಜುಗಡ್ಡೆಯ ನಡುವೆ ಹೆಚ್ಚಿನ ಶೂಟಿಂಗ್ ಮಾಡಿಬಂದಿರುವ ಶಾನ್‍ದಾರ್ ತಂಡದಿಂದ ಸಿಕ್ಕಿರುವ ಫೋಟೋಗಳೆಂದರೆ ಅದು ಶಾಹಿದ್ ಆಲಿಯಾ ಇನ್‍ಸ್ಟಾಗ್ರಾಮಲ್ಲಿ ಹಾಕಿರುವ ಸೆಲ್ಫೀಗಳು ಮಾತ್ರ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ