ಸಲ್ಮಾನ್ ನನ್ನ ಜೀವನದ ಪ್ರಮುಖ ಭಾಗ: ಕತ್ರಿನಾ ಕೈಫ್

ಸಲ್ಮಾನ್ ಖಾನ್ ನನ್ನ ಜೀವನದ ಪ್ರಮುಖ ಭಾಗಗಳಲ್ಲಿ ಒಬ್ಬರು. ನಾವಿಬ್ಬರು ಉತ್ತಮ ಸ್ನೇಹಿತರು. ನಮ್ಮಿಬ್ಬರ ಸಂಬಂಧವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು, ಪ್ರಚಾರ ಮಾಡುವುದು ನನಗೆ ಇಷ್ಟವಿಲ್ಲ. ಹೀಗೆಂದು ಹೇಳಿದವರು ಬೇರಾರೂ ಅಲ್ಲ ಬಾಲಿವುಡ್ ಬೆಡಗಿ ಸಲ್ಮಾನ್ ಖಾನ್ ಅವರ...
ಕತ್ರಿನಾ ಕೈಫ್
ಕತ್ರಿನಾ ಕೈಫ್
Updated on

ಸಲ್ಮಾನ್ ಖಾನ್ ನನ್ನ ಜೀವನದ ಪ್ರಮುಖ ಭಾಗಗಳಲ್ಲಿ ಒಬ್ಬರು. ನಾವಿಬ್ಬರು ಉತ್ತಮ ಸ್ನೇಹಿತರು. ನಮ್ಮಿಬ್ಬರ ಸಂಬಂಧವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು, ಪ್ರಚಾರ ಮಾಡುವುದು ನನಗೆ ಇಷ್ಟವಿಲ್ಲ. ಹೀಗೆಂದು ಹೇಳಿದವರು ಬೇರಾರೂ ಅಲ್ಲ ಬಾಲಿವುಡ್ ಬೆಡಗಿ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಕತ್ರಿನಾ ಕೈಫ್.

ಖಾಸಗಿ ವಾಹಿನಿಯೊಂದರ ಸಂದರ್ಶನದ ವೇಳೆ ಮಾತನಾಡಿರುವ ಕತ್ರಿನಾ ಕೈಫ್, ಸಲ್ಮಾನ್ ಖಾನ್ ನನ್ನ ವೈಯಕ್ತಿಕ ಹಾಗೂ ವೃತ್ತಿಪರವಾಗಿ ಎಲ್ಲಾ ಸಂದರ್ಭಗಳಲ್ಲಿಯೂ ಬೆಂಬಲ ನೀಡಿದ್ದಾರೆ. ನಮ್ಮಿಬ್ಬರ ನಡುವಿನ ಸಂಬಂಧದ ಕುರಿತು ಹೇಳಿಕೊಳ್ಳುವಂತಹ ವಿಷಯ ಬಹಳಷ್ಟಿದೆ. ಆದರೆ ಅವುಗಳನ್ನು ಸಾರ್ವಜನಿಕವಾಗಿ ಹೇಳಲು ನನಗಿಷ್ಟವಿಲ್ಲ ಎಂದು ಹೇಳಿದ್ದಾರೆ.

ಸಲ್ಮಾನ್ ನನ್ನ ಜೀವನದ ಪ್ರಮುಖ ಭಾಗಗಳಲ್ಲಿ ಒಬ್ಬರು. ಸಿನಿಮಾದಲ್ಲಿ ಮಾತ್ರವೇ ಅಲ್ಲ, ಎಲ್ಲ ರೀತಿಯಲ್ಲಿಯೂ ಅವರು ನನಗೆ ಪ್ರಮುಖ ವ್ಯಕ್ತಿ. ಅವರ ವ್ಯಯಕ್ತಿತ್ವವೊಂದು ಅದ್ಭುತ ಹಾಗೂ ಅನನ್ಯ. ಪ್ರತಿಯೊಂದು ಕ್ಷಣದಲ್ಲಿಯೂ ಸಲ್ಮಾನ್ ಪ್ರಮುಖ ವ್ಯಕ್ತಿ ಎಂಬುದು ನನಗೆ ನೆನಪಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ಸಲ್ಮಾನ್ ಅವರ ಕುಟುಂಬಸ್ಥರು ಹಾಗೂ ಅವರ ತಂಗಿಯೂ ಕೂಡ ನನಗೆ ವಿಶೇಷ ವ್ಯಕ್ತಿಗಳೇ. ಸಲ್ಮಾನ್ ಬಂದಿದ್ದಾರೆ ಎಂದು ಮಾತನಾಡಿಸಲು ಹಿಂಜರಿಯಬೇಡಿ, ಅಭಿಮಾನಿಗಳೊಂದಿಗೆ ಅವರು ಮಾತನಾಡುವ ರೀತಿ ಹಾಗೂ ಅವರೊಂದಿಗೆ ತೊಡಗಿಕೊಳ್ಳುವ ರೀತಿ ಸಾಮಾನ್ಯ ವ್ಯಕ್ತಿಯಂತಿರುತ್ತದೆ. ಸೆಲೆಬ್ರಿಟಿಯಂತೆ ವರ್ತಿಸುವುದಿಲ್ಲ. ಸಲ್ಮಾನ್ ರಂತಹ ವ್ಯಕ್ತಿಯನ್ನು ಇಡೀ ಪ್ರಪಂಚದಲ್ಲಿಯೇ ಹುಡುಕಿದರು ಸಿಗುವುದಿಲ್ಲ ಎಂದು ಸಲ್ಮಾನ್ ಖಾನ್ ಅವರನ್ನು ಕತ್ರಿನಾ ಕೈಫ್ ಹಾಡಿ ಹೊಗಳಿದ್ದಾರೆ.

ಇದೇ ವೇಳೆ ತಮ್ಮ ಹಾಗೂ ಸಲ್ಮಾನ್ ಖಾನ್ ಅವರ ವಿರುದ್ಧ ಇರುವ ಗಾಸಿಪ್ ಗಳ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಕತ್ರಿನಾ ಕೈಫ್ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ಕಂಡರೆ ನನಗೆ ಇಷ್ಟವಾಗುವುದಿಲ್ಲ. ಕೆಲವು ಹೇಳಿಕೆ, ಸುದ್ದಿಗಳು ನನಗೆ ಬಹಳಷ್ಟು ನೋವನ್ನು ತಂದಿದೆ. ಈ ಕಾರಣದಿಂದಲೇ ನಾನು ಸಾಮಾಜಿಕ ಜಾಣಗಳಲ್ಲಿ ನಾನು ಬರುವುದಿಲ್ಲ. ಹಾಗೆಂದು ಮಾತನಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಜೀವನದಲ್ಲಿ ಕುಗ್ಗುವ ಪ್ರಯತ್ನವನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com