ಪಾಪ ಪಾಂಡೆ..!
ಭಾರತ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಕ್ಕೆ ಪೂನಂ ಪಾಂಡೆ ನಿರಾಶಳಾಗಿಜ್ಜಾಳೆ. ಐದು ವರ್ಷದಿಂದ ಆಕೆ ನಗ್ನಳಾಗೋ ಅವಕಾಶವನ್ನು ಟೀಂ ಇಂಡಿಯಾ ತಪ್ಪಿಸುತ್ತಿದೆ. ಹಾಗಂತ ಸಿನಿಮಾದಲ್ಲಾದರೂ ಬಿಚ್ಚೋಣ ಅಂದ್ರೆ ಅಲ್ಲೂ ಅವಕಾಶಗಳು ಸಿಗುತ್ತಿಲ್ಲ.
ಕನ್ನಡದಲ್ಲೊಂದು ಐಟಮ್ ಸಾಂಗು ಮಾಡಿ ನಂತರ ತೆಲುಗಿನ ಕಾಂಟ್ಯಾಕ್ಟ್ ಗಿಟ್ಟಿಸಿದ್ದ ಪೂನಂ, ಮಾಲಿನಿ ಆ್ಯಂಡ್ ಕೊ ಚಿತ್ರದಲ್ಲಿ ನಟಿಸಿ ಹೋಗಿದ್ದಾಳೆ. ಬಾಲಿವುಡ್‍ನಲ್ಲಿ ಹೆಲೆನ್ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿರುವ ಪೂನಂಗೆ ಮಾಲಿನಿ ಆ್ಯಂಡ್ ಕೊ ಚಿತ್ರದಲ್ಲಿ ಅಂದಿನ ಕ್ಯಾಬರೆ ಡಾನ್ಸರ್ ಜಯಮಾಲಿನಿಯ ಪಾತ್ರವಂತೆ. ಮಾಲಿನಿ ಆ್ಯಂಡ್ ಕೋ ಚಿತ್ರದ ಪತ್ರಿಕಾ ಜಾಹೀರಾತೊಂದು ಇದೀಗ ಆಂಧ್ರದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ.
ಅರೆಬರೆ ಬಟ್ಟೆಯ ಪೂನಂ ಪಾಂಡೆ ಚಿತ್ರದ ಜೊತೆಗೆ ರಾಮನವಮಿಯ ಶುಭಾಶಯಗಳು ಎಂಬ ಜಾಹೀರಾತನ್ನು ಚಿತ್ರದ ನಿರ್ಮಾಪಕರು ಪತ್ರಿಕೆಗಳಿಗೆ ನೀಡಿದ್ದಾರೆ ಎಂಬುದು ರಾಮಭಕ್ತರ ಕೋಪಕ್ಕೆ ಕಾರಣ. ಅಷ್ಟೇ ಅಲ್ಲದೆ ಶೀಘ್ರದಲ್ಲೇ ಪೂನಂ ನಟಿಸಿರುವ ಮಸಾಜ್ ಸಾಂಗ್ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂಬ ಸಾಲನ್ನೂ ಜಾಹೀರಾತಲ್ಲಿ ಸೇರಿಸಿರೋದ್ರಿಂದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂದು ಜನ ಆಕ್ರೋಶ ತೋರಿದ್ದಾರೆ. ಆದರೆ ಪಾಪ ಪೂನಂಗೆ ಇವೆಲ್ಲ ಗೊತ್ತೇ ಇಲ್ಲ. ಆಕೆ ಇಂಡಿಯಾ ವಿಶ್ವಕಪ್ ಸೋತಿರೋದಕ್ಕೆ ತನ್ನದೇ ಬೇಜಾರಲ್ಲಿದ್ದಾಳೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ