
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ತಮ್ಮ ಬಹುನಿರೀಕ್ಷಿತ ಚಿತ್ರ 'ಡ್ಯಾಂಗಲ್' ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಚೀನಾದ ಆಕ್ಷನ್ ಸ್ಟಾರ್ ಜಾಕಿ ಜಾನ್ ಜತೆ ನಟಿಸುತ್ತಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಇಂಡೋ-ಚೈನೀಸ್ ಪ್ರೋಡಕ್ಷನ್ ನಲ್ಲಿ 'ಕುಂಗ್ ಫೂ ಯೋಗ' ಶೀರ್ಷಿಕೆಯಡಿಯಲ್ಲಿ ಚಾಕಿಚಾನ್ ಅವರು ಎರಡು ದೇಶಗಳು ಸಾಂಪ್ರದಾಯಿಕ ಕಲೆಯನ್ನು ಪರದೆ ಮೇಲೆ ತೋರಿಸಲು ಮುಂದಾಗಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಸ್ಟ್ಯಾನ್ಲೇ ಟಾಂಗ್ ರ ಕೈಯಲ್ಲಿ ಮಾಡಿಸಲು ಜಾಕಿಚಾನ್ ಯೋಚಿಸಿದ್ದಾರೆ ಎಂದರು.
ಕುಂಗ್ ಫೂ ಯೋಗ ಚಿತ್ರದ ಚಿತ್ರೀಕರಣ ಮುಂದಿನ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನಡೆಸುವ ಸಾಧ್ಯತೆ ಇದ್ದು, ಇದೇ ವೇಳೆ ತಮ್ಮ ಡ್ಯಾಂಗಲ್ ಚಿತ್ರದ ಚಿತ್ರೀಕರಣ ಇರುವುದರಿಂದ ಕುಂಗು ಫೂ ಯೋಗ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಿಲ್ಲ ಎಂದು ಆಮೀರ್ ಖಾನ್ ಸಂದರ್ಶನದಲ್ಲಿ ಹೇಳಿದ್ದಾರೆ.
ನಾನು ಜಾಕಿಚಾನ್ ಅವರ ದೊಡ್ಡ ಅಭಿಮಾನಿ. ಅವರ ಸಾಕಷ್ಟು ಸಿನಿಮಾಗಳನ್ನು ನಾನು ವೀಕ್ಷಿಸಿದ್ದೇನೆ. ಅದರಲ್ಲೂ ಪೊಲೀಸ್ ಸ್ಟೋರಿ ಚಿತ್ರವನ್ನು ಹಲವು ಬಾರಿ ಚಿತ್ರಮಂದಿರಗಳಲ್ಲಿ ವೀಕ್ಷಿಸಿದ್ದೇನೆ ಎಂದರು. ಅವರು ಕೇವಲ ಆಕ್ಷನ್ ಹೀರೋ ಅಲ್ಲ, ಅವರ ಕಾಮಿಡಿ ಸಹ ಸೂಪರ್ ಎಂದು ಕೊಂಡಾಡಿದ್ದಾರೆ.
Advertisement