ನವದೆಹಲಿ: ಬಹುಭಾಷಾ ಹಿರಿಯ ನಟ ಸಯೀದ್ ಜಾಫ್ರಿ ಇನ್ನಿಲ್ಲ. 86 ವರ್ಷದ ಸಯೀದ್ ಜಾಫ್ರಿ ನವೆಂಬರ್ 15ರಂದು ನಿಧನರಾಗಿದ್ದಾರೆ.
ಟ್ವೀಟರ್ ನಲ್ಲಿ ಬಾಲಿವುಡ್ ಸ್ಟಾರ್ ಗಳು ಸಂತಾಪ ಸೂಚಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗುತ್ತಿದೆ.
ಜಾಫ್ರಿ ಅವರು ಬ್ರಿಟಿಷ್ ಮತ್ತು ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಪಂಜಾಬ್ ನ ಮಲೆರ್ ಕೊಟ್ಲಾದಲ್ಲಿ ಜನಿಸಿದ್ದ ಜಾಫ್ರಿ ಗಾಂಧಿ, ಶತ್ರಂಜಿ ಕಿ ಕಿಲಾಡಿ, ದಿ ಮ್ಯಾನ್ ಹೂ ವುಡ್ ಬಿ ಕಿಂಗ್, ಅ ಪ್ಯಾಸೇಜ್ ಟು ಇಂಡಿಯಾ ಸೇರಿದಂತೆ ಅನೇಕ ಬ್ರಿಟಿಷ್ ಮತ್ತು ಭಾರತೀಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಬ್ರಿಟಿಷ್ ಮತ್ತು ಕೆನಾಡದ ಅಕಾಡೆಮಿ ಪ್ರಶಸ್ತಿಗೆ ನಾಮ ನಿರ್ದೇಶನ ಪಡೆದ ಮೊದಲನೇ ಏಷ್ಯಾ ಪ್ರಜೆ. ಆಲ್ ಇಂಡಿಯಾ ರೇಡಿಯೋ ನಿರ್ದೇಶಕರಾಗಿ 1951ರಿಂದ 1956ರವರೆಗೆ ಸೇವೆ ಸಲ್ಲಿಸಿದ್ದರು.
ಸಯೀದ್ ಜಾಫ್ರೀ ಮಧುರ್ ಜಾಫ್ರೀಯನ್ನು ವಿವಾಹವಾಗಿದ್ದು, 1965 ರಲ್ಲಿ ವಿಚ್ಛೇದನೆ ಪಡೆದಿದ್ದರು. ಮಧುರ್ ರೊಂದಿಗೆ ಸಯೀದ್ ರಿಗೆ ಮೀರಾ, ಝಿಯಾ, ಸಕೀನಾ ಜಾಫ್ರೀ ಎಂಬ ಮೂವರು ಪುತ್ರಿಯರಿದ್ದರು.