ಮಹಿಳೆಯರು ಪರಸ್ಪರ ಕಿತ್ತಾಡುವುದು ತಮಾಷೆಯೆನಿಸುತ್ತದೆ: ಮಹಿಳಾವಾದಿ ನಟಿ ಕಲ್ಕಿ
ನವದೆಹಲಿ: ತಾವೇ ನಿಜವಾದ ಮಹಿಳಾವಾದಿಗಳು ಎಂದು ಮಹಿಳೆಯರು ಪರಸ್ಪರ ಕಚ್ಚಾಡುವುದನ್ನು ನೋಡಲು ನಿಜವಾಗಿಯೂ ತಮಾಷೆ ಎಂದು ಮಹಿಳಾವಾದದ ಬಗ್ಗೆ ಯಾವಾಗಲೂ ಧ್ವನಿಯೆತ್ತಿರುವ ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ತಿಳಿಸಿದ್ದಾರೆ.
ನಿಕೊಲಸ್ ಖರ್ಕೋಂಗಾರ್ ನಿರ್ದೇಶನದ 'ಮಂತ್ರ'ದಲ್ಲಿ ರಾಜ್ ಕಪೂರ್ ಅವರ ಸಿಡಿದೆದ್ದ ಪುತ್ರಿಯಾಗಿ ಕಾಣಿಸಿಲೊಳ್ಳಲಿರುವ ೩೧ ವರ್ಷದ ನಟಿ ಭಾರತದಲ್ಲಿ ಮಹಿಳಾವಾದವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದಾರೆ.
"ಯಾರು ನಿಜವಾದ ಮಹಿಳಾವಾದಿ ಎಂದು ಹಲವಾರು ಜನ ಕಿತ್ತಾಡುವುದನ್ನು ನೋಡಿದ್ದೇನೆ. ನೀನು ನಿಜಾವದ ಮಹಿಳಾವಾದಿಯಲ್ಲ ಎಂದು ಮಹಿಳೆಯರು ಪರಸ್ಪರ ಕಿತ್ತಾಡುವುದು ತಮಾಷೆಯೆನಿಸುತ್ತದೆ. ನನ್ನ ಪ್ರಕಾರ ಮಹಿಳೆಯರು ಮತ್ತೊಬ್ಬ ಮಹಿಳೆಯ ಬೆಂಬಲಕ್ಕೆ ನಿಲ್ಲಬೇಕು" ಎಂದು ಪ್ರಶಸ್ತಿ ವಿಜೇತ ಸಿನೆಮಾ 'ಮಾರ್ಗರಿಟಾ ವಿತ್ ಎ ಸ್ಟ್ರಾ' ಸಿನೆಮಾದ ನಟಿ ಹೇಳಿದ್ದಾರೆ.
"ಪುರಷರಿಗಿರುವ ಸಮಾನ ಸ್ಥಾನಮಾನ,ಹಕ್ಕು ಮಹಿಳೆಯರಿಗೆ ಇರಬೇಕು ಎಂದು ನಂಬುವವರೆಲ್ಲರೂ ಮಹಿಳಾವಾದಿಗಳೇ" ಎಂದು ಅವರು ಹೇಳಿದ್ದಾರೆ.
ಶಿವಸೇನಾ ಪಾಕಿಸ್ತಾನಿ ನಟರನ್ನು ಬಾಲಿವುಡ್ ನಲ್ಲಿ ನಟಿಸದಂತೆ ತಡೆಯುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ಅದೆಲ್ಲ ಸ್ವಂತ ಲಾಭಕ್ಕಾಗಿ ಎಂದಿದ್ದಾರೆ.
"ನಿಮಗೆ ಕಲೆ ಇದ್ದ ಮೇಲೆ ನಿಮ್ಮ ರಾಷ್ಟ್ರೀಯತೆ ಮುಖ್ಯವಲ್ಲ. ಜನ ನಿಮ್ಮಲ್ಲಿರುವ ಕಲೆಯನ್ನು ಒಪ್ಪಿಕೊಳ್ಳಬೇಕಷ್ಟೇ" ಎಂದು ಕೂಡ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ