
ಮುಂಬೈ: ಬಾಲಿವುಡ್ ಚಿತ್ರೋದ್ಯಮದಲ್ಲಿ ೯೦ರ ದಶಕದಲ್ಲಿ ಖ್ಯಾತ ತಾರೆಯಾಗಿದ್ದ ಕರಿಷ್ಮಾ ಕಪೂರ್ ಕುಟುಂಬಕ್ಕಾಗಿ ತಮ್ಮ ವೃತ್ತಿಯನ್ನೇ ತೊರೆದಿದ್ದರು. ಮತ್ತೆ ಸಿನೆಮಾಗೆ ಹಿಂದಿರುಗಲಿದ್ದಾರೆ ಎಂಬ ವದಂತಿಗಳ ನಡುವೆ ಕರಿಷ್ಮಾ ಪ್ರತಿಕ್ರಿಯಿಸಿದ್ದಾರೆ.
"ತೆರೆಗೆ ಹಿಂದಿರುಗುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸದ್ಯಕ್ಕೆ ನನ್ನ ಕುಟುಂಬದ ಜೊತೆ ಬ್ಯುಸಿಯಾಗಿದ್ದೇನೆ" ಎಂದು ಡಯಾಬೆಟೆಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ತಾರೆ ತಿಳಿಸಿದ್ದಾರೆ.
"ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನನಗೆ ಇಷ್ಟ. ನಾವು ನಮ್ಮ ಜೀವನದಲ್ಲಿ ಮುಳುಗಿ ಹೋಗುವ ಸಮಯದಲ್ಲಿ ಆರೋಗ್ಯ ಕಾಳಜಿ ಅತಿ ಮುಖ್ಯ" ಎಂದು ಕೂಡ ಅವರು ಹೇಳಿದ್ದರೆ.
ಎರಡು ಮಕ್ಕಳ ತಾಯಿಯಾಗಿರುವ ಕರಿಷ್ಮಾ ತಮ್ಮ ಆಕರ್ಷಣೆಯನ್ನು ಇನ್ನೂ ಉಳಿಸಿಕೊಂಡಿದ್ದು ಸಿನೆಮಾಗೆ ಹಿಂದಿರುಗಲಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು,
ಅವರ ಡಯಟ್ ವಿವರಿಸುವ ಕರಿಷ್ಮಾ "ನಾನು ಕಠಿಣವಾದ ಡಯಟ್ ಏನು ಅನುಸರಿಸುವುದಿಲ್ಲ. ನಾನು ಸಿಕ್ಕಿದ್ದನ್ನೆಲ್ಲಾ ತಿನ್ನುವವಳು ಆದರೆ ನಿಯಂತ್ರಣದಲ್ಲಿ ತಿನ್ನುತ್ತೇನೆ. ಎಲ್ಲರೂ ಜಿಮ್ ಗೆ ಹೋಗಲು ಅಥವಾ ವ್ಯಾಯಾಮ ಮಾಡಲು ಬಯಸುವುದಿಲ್ಲ. ಆದರೆ ನಡಿಗೆ ಅದ್ಭುತ ವ್ಯಾಯಾಮ. ಯಾರು ಏನು ಮಾಡಿದರೂ ನಡಿಗೆ ಅತ್ಯಗತ್ಯ" ಎಂದು ಅವರು ಹೇಳಿದ್ದಾರೆ.
Advertisement