'ಧೂಮ್ 4' ಗೆ ಅಮಿತಾಬ್ ಬಚ್ಚನ್ ಅವರನ್ನು ಕೇಳಿಲ್ಲ: ನಿರ್ದೇಶಕ

ಧೂಮ್ ಸಿನೆಮಾ ಸರಣಿಯ ಧೂಮ್ 4 ರಲ್ಲಿ ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ ಎಂಬ ವದಂತಿಗೆ ಕೊನೆ ಹಾಡಿರುವ ನಿರ್ದೇಶಕ, ಬಚ್ಚನ್ ಅವರನ್ನು ನಟಿಸುವಂತೆ ನಾವು
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
Updated on

ಮುಂಬೈ: ಧೂಮ್ ಸಿನೆಮಾ ಸರಣಿಯ ಧೂಮ್ 4 ರಲ್ಲಿ ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ ಎಂಬ ವದಂತಿಗೆ ಕೊನೆ ಹಾಡಿರುವ ನಿರ್ದೇಶಕ, ಬಚ್ಚನ್ ಅವರನ್ನು ನಟಿಸುವಂತೆ ನಾವು ಕೇಳಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ನಿರ್ಮಾಪಕ ಆದಿತ್ಯ ಚೋಪ್ರಾ ಮತ್ತು ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಅವರು ಧೂಮ್-೪ ನಟನೆಗಾಗಿ ಹೃತಿಕ್ ರೋಶನ್ ಮತ್ತು ಅಮಿತಾಬ್ ಬಚ್ಚನ್ ಅವರ ಮೊರೆ ಹೋಗಿದ್ದಾರೆ ಎಂಬ ವರದಿಗಳು ಹರಡಿದ್ದವು.

ಇದೇ ವಿಷಯವಾಗಿ ನಿರ್ದೇಶಕ ಆಚಾರ್ಯರನ್ನು ಪ್ರಶ್ನಿಸಿದಾಗ "ಅಂತಹ ಯಾವುದೇ ಯೋಜನೆಗಳಿಲ್ಲ" ಎಂದು ಅವರು ಹೇಳಿದ್ದಾರೆ.

ಧೂಮ್ ೨ ನಲ್ಲಿರುವಂತೆಯೇ ಹೃತಿಕ್ ಇದರಲ್ಲೂ ಖಳನಾಯಕನ ಪಾತ್ರ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ "ಇನ್ನು ಕೆಲವೇ ವಾರಗಳಲ್ಲಿ ಸಿನೆಮಾದ ಘೋಷಣೆ ಮಾಡಲಿದ್ದೇವೆ. ಆಗ ಸಿನೆಮಾ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತೇವೆ" ಎಂದು ಆಚಾರ್ಯ ಹೇಳಿದ್ದಾರೆ.

ಯಶ್ ರಾಜ್ ಸಿನೆಮಾಸ್ ಸಂಸ್ಥೆಯ ಅಧಿಕಾರಿ ನೀಡಿರುವ ಹೇಳಿಕೆಯಲ್ಲಿ "ಮುಂದಿನ ಸಿನೆಮಾಗಳ ಬಗೆಗೆ ಅಧಿಕೃತ ಹೇಳಿಗೆ ಬೀಳುವವರೆಗೂ ದಯವಿಟ್ಟು ಕಾದು ನೋಡಿ. ದಯವಿಟ್ಟು ಯಾವುದೇ ಊಹೆಗಳನ್ನು ಮಾಡದಿರಿ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com