ಗೀತಾ ಬಯಕೆ, ಆಂಗಿಕ ಭಾಷೆಗೆ ಭಜರಂಗಿ ಭಾಯಿಜಾನ್ ಡಬ್

13 ವರ್ಷಗಳ ಹಿಂದೆ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಸೇರಿದ್ದ ಭಾರತದ ಯುವತಿ ಗೀತಾಳಾ ಬಯಕೆ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭಜರಂಗ...
ಗೀತಾ
ಗೀತಾ
ಇಂದೋರ್: 13 ವರ್ಷಗಳ ಹಿಂದೆ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಸೇರಿದ್ದ ಭಾರತದ ಯುವತಿ ಗೀತಾಳಾ ಬಯಕೆ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭಜರಂಗ ಭಾಯಿಜಾನ್ ಚಿತ್ರವನ್ನು ಆಂಗಿಕ ಭಾಷೆಗೆ ಡಬ್ ಮಾಡಲಾಗುತ್ತಿದೆ. 
ಭಜರಂಗಿ ಭಾಯಿಜಾನ್ ಚಿತ್ರದ ಕಥೆಯನ್ನೇ ಹೋಲುವ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿತ್ತು. 13 ವರ್ಷಗಳ ಹಿಂದೆ ಗೀತಾ ಆಕಸ್ಮಿಕವಾಗಿ ಪಾಕ್ ಗೆ ತೆರಳಿದ್ದಳು. ಅಂದಿನಿಂದ ತನ್ನ ಹೆತ್ತವರಿಗಾಗಿ ಹಂಬಲಿಸುತ್ತಿದ್ದಳು. ಗೀತಾ ಪ್ರಕರಣ ಜಾಗಜ್ಜಾಹೀರಾಗಲು ಪ್ರಮುಖ ಕಾರಣವಾದ ಭಜರಂಗಿ ಭಾಯಿಜಾನ್ ಚಿತ್ರವನ್ನು ಆಂಗಿಕ ಭಾಷೆಗೆ ಡಬ್ ಮಾಡುವಂತೆ ಆಶಿಸಿದ್ದಳು. ಈ ಹಿನ್ನೆಲೆಯಲ್ಲಿ ಚಿತ್ರವನ್ನು ಆಂಗಿಕ ಭಾಷೆಗೆ ಡಬ್ ಮಾಡಲಾಗುತ್ತಿದ್ದು, ಇದನ್ನು ವಿಶೇಷ ಜನರು ನೋಡಬಹುದಾಗಿದೆ.
ಗೀತಾ ಪ್ರಕರಣಕ್ಕೆ ಕುರಿತಂತೆ ಕಳೆದ ಮೂರು ತಿಂಗಳಿಂದ ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಗೀತಾ ಕೋರಿಕೆ ಮೇರೆಗೆ ಚಿತ್ರವನ್ನ ಡಬ್ ಮಾಡುತ್ತದ್ದು. ಗೀತಾ ಭಾರತಕ್ಕೆ ಬಂದ ಮೇಲೆ ಚಿತ್ರವನ್ನು ಪ್ರದರ್ಶನ ಮಾಡಲಾಗುವುದು. ಈ ವಿಶೇಷ ಪ್ರದರ್ಶನದಲ್ಲಿ ಗೀತಾ ಹಾಗೂ ಸಲ್ಮಾನ್ ಖಾನ್ ಭಾಗಿಯಾಗಲಿದ್ದಾರೆ ಎಂದು ಪುರೋಹಿತ್ ಹೇಳಿದ್ದಾರೆ. 
ಪುರೋಹಿತ್ ಅವರು 1975ರಲ್ಲಿ ತೆರೆಕಂಡಿದ್ದ ಶೋಲೆ ಚಿತ್ರ, ಗಾಂಧೀ(1982), ಮುನ್ನಾಬಾಯ್ ಎಂಬಿಬಿಎಸ್(2003) ಹಾಗೂ ತಾರೆ ಜಮೀರ್ ಪರ್(2007) ಚಿತ್ರಗಳನ್ನು ಆಂಗಿಕ ಭಾಷೆಗೆ ಡಬ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭಜರಂಗ ಭಾಯಿಜಾನ್ ಚಿತ್ರ ಉತ್ತಮ ದಾಖಲೆ ಮಾಡಿತ್ತು. ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ಮಾತನಾಡದೇ ಬಾಲ ನಟಿ ಹರ್ಷಾಲಿ ಮಲ್ಹೋತ್ರ ಅಭಿನಯ ಪ್ರೇಕ್ಷಕರನ್ನು ಮೂಕ ವಿಸ್ಮಿತರಾಗುವಂತೆ ಮಾಡಿತ್ತು. 
ಗೀತಾಳಿಗೆ ಭಾರತದಲ್ಲಿರುವ ಆಕೆಯ ಪೋಷಕರನ್ನು ಪತ್ತೆ ಹಚ್ಚುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರ ಗೀತಾಳ ವಾಪಸ್ಸಾತಿಗೆ ಬೇಕಾದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದು, ಇದೇ ಅಕ್ಟೋಬರ್ 26ಕ್ಕೆ ಗೀತಾ ಭಾರತಕ್ಕೆ ವಾಪಸ್ಸಾಗುತ್ತಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com