೫೦ರ ಹೊಸ್ತಿಲಲ್ಲಿ ಶಾರುಕ್; ಮತ್ತೆ ವೋಗ್ ನಿಯತಕಾಲಿಕೆಯ ಮುಖಪುಟ ರೂಪದರ್ಶಿ

ವೋಗ್ ಇಂಡಿಯಾ ನಿಯತಕಾಲಿಕೆಯ ನವೆಂಬರ್ ಸಂಚಿಕೆಯ ಮುಖಪುಟದಲ್ಲಿ, ನವೆಂಬರ್ ೨ ಕ್ಕೆ ೫೦ ವಸಂತಗಳನ್ನು ಪೂರೈಸಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಕಾಣಿಸಿಕೊಂಡಿದ್ದಾರೆ.
ವೋಗ್ ಇಂಡಿಯಾ ನಿಯತಕಾಲಿಕೆಯ ನವೆಂಬರ್ ಸಂಚಿಕೆಯ ಮುಖಪುಟದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್
ವೋಗ್ ಇಂಡಿಯಾ ನಿಯತಕಾಲಿಕೆಯ ನವೆಂಬರ್ ಸಂಚಿಕೆಯ ಮುಖಪುಟದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್
Updated on

ವೋಗ್ ಇಂಡಿಯಾ ನಿಯತಕಾಲಿಕೆಯ ನವೆಂಬರ್ ಸಂಚಿಕೆಯ ಮುಖಪುಟದಲ್ಲಿ, ನವೆಂಬರ್ ೨ ಕ್ಕೆ ೫೦ ವಸಂತಗಳನ್ನು ಪೂರೈಸಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಕಾಣಿಸಿಕೊಂಡಿದ್ದಾರೆ. 'ರೋಮ್ಯಾನ್ಸ್ ರಾಜ', 'ಬಾದ್ ಶಾಃ' ಮತ್ತು 'ಕಿಂಗ್ ಖಾನ್' ಎಂಬ ಹೆಸರುಗಳೊಂದಿಗೆ ಕರೆಸಿಕೊಳ್ಳುವ ನಟನಿಗೆ ೫೦ ರ ವಸಂತವೂ ತಾರುಣ್ಯವೇ!

"ನಾನು ಅಹಂಕಾರಾದ ಅಥವಾ ಸೊಕ್ಕಿನ ರೀತಿಯಲ್ಲಿ ಹೇಳುತ್ತಿಲ್ಲ. ಆದರೆ ನನ್ನ ೫೦ ರ ವಯಸ್ಸಿನಲ್ಲಿ ನಾನು ಬಯಸಿರುವುದೆಲ್ಲವೂ ಇದೆ" ಎಂದು ಶಾರುಕ್ ಖಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕ್ಯಾಮರಾ ಅವರನ್ನು ಇಷ್ಟ ಪಡುತ್ತದೆ ಹಾಗೆಯೇ ಅವರ ಅಭಿಮಾನಿಗಳು ಕೂಡ. ಹೀಗಿದ್ದಾಗ ತಮ್ಮ ೫೦ನೆಯ ವಸಂತದಲ್ಲೂ ಮುನ್ನುಗ್ಗುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಮುಂದಿನ ವರ್ಷಗಳಲ್ಲಿ ಇಟಲಿಯ ಖಾದ್ಯಗಳನ್ನು ತಯಾರಿಸುವುದ ಕಲಿಯುವುದು, ಗಿಟಾರ್ ನಲ್ಲಿ ೧೦ ಅತ್ಯುತ್ತಮ ಹಾಡುಗಳನ್ನು ಬಾರಿಸುವುದು ಅವುಗಳನ್ನು ವಿಶ್ವದ ಅತಿ ಸುಂದರ ಮಹಿಳೆಯರೊಂದಿಗೆ ಹಾಡುವುದು ಹೀಗೆ ಹತ್ತು ಹಲವು ಹೊಸ ಕೆಲಸಗಳನ್ನು ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಸಂದರ್ಶನದಲ್ಲಿ ನಟ ತಿಳಿಸಿದ್ದಾರೆ.

ಸದ್ಯಕ್ಕೆ ನಟನ 'ದಿಲ್ವಾಲೇ', 'ರಯೀಸ್' ಮತ್ತು 'ಫ್ಯಾನ್' ಚಿತ್ರಗಳು ಬಿಡುಗಡೆಯಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com