
ಮುಂಬೈ: ಇಮ್ರಾನ್ ಖಾನ್ ನಟಿಸಿರುವ 'ಕಟ್ಟಿ ಬಟ್ಟಿ' ಸಿನೆಮಾ ನೋಡಿದ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ನಟನಿಗೆ ಸಂದೇಶ ಕಳುಹಿಸಿದ್ದು, 'ಬ್ಯಾಂಗ್ ಬ್ಯಾಂಗ್ ನಟನಿಂದ ಬಂದ ಸಂದೇಶವನ್ನು ನೋಡಿ ನನಗೆ ನಂಬಲಾಗಲಿಲ್ಲ, ನಾನು ಬೆರಗಾದೆ ಎಂದಿದ್ದಾರೆ.
"ನನಗಷ್ಟೇ ಹೃತಿಕ್ ಅತಿ ದೊಡ್ಡ ಸ್ಫೂರ್ತಿಯಲ್ಲ, ಆದರೆ ಒಂದು ಪೀಳಿಗೆಯ ನಟರಿಗೆ. ಅವರು ಸಂದೇಶ ಕಳುಹಿಸಿದ್ದನ್ನು ನಂಬಲೇ ಆಗಲಿಲ್ಲ. ನಾನು ಬೆರಗಾದೆ" ಎಂದು ಇಮ್ರಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಖಿಲ್ ಅದ್ವಾನಿ ನಿರ್ದೇಶನದ 'ಕಟ್ಟಿ ಬಟ್ಟಿ'ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಕಂಗನಾ ರನೌತ್ ನಟಿಸಿರುವ ಈ ಸಿನೆಮಾ ಲಿವ್-ಇನ್ ಸಂಬಂಧಗಳ ಕಥೆ ಹೇಳುತ್ತದೆ.
ಸುಮಾರು ಎರಡು ವರ್ಷಗಳ ನಂತರ ಇಮ್ರಾನ್ ಖಾನ್ ಬೆಳ್ಳಿ ತೆರೆಗೆ ಈ ಸಿನೆಮ ಮೂಲಕ ಹಿಂದಿರುಗಿದ್ದಾರೆ.
Advertisement