ಮನೋಜ್ ಬಾಜಪೇಯ್
ಬಾಲಿವುಡ್
ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ಸ್ಪೋರ್ಟ್ಸ್ ಶೂ ವಿತರಿಸಿದ ನಟ ಮನೋಜ್ ಬಾಜಪೇಯ್
ಒಂದು ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ಶೂ ವಿತರಿಸುವ ಮೂಲಕ ಬಾಲಿವುಡ್ ನಟ ಮನೋಜ್ ಬಾಜಪೇಯ್ ಸಾಮಾಜಿಕ ಕಳಕಳಿ ಮೆರೆದಿದ್ದಾರೆ...
ನವದೆಹಲಿ: ಒಂದು ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ಶೂ ವಿತರಿಸುವ ಮೂಲಕ ಬಾಲಿವುಡ್ ನಟ ಮನೋಜ್ ಬಾಜಪೇಯ್ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ರಿಲೀಸ್ ಗೆ ಸಿದ್ಧವಾಗಿರುವ ಬುಧಿಯಾ ಸಿಂಗ್- ಬಾರ್ನ್ ಟು ರನ್ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಮನೋಜ್ ಬಾಜಪೇಯ್ ಕ್ರೀಡಾ ಸಚಿವ ವಿಜಯ್ ಗೋಯಲ್ ಸಮ್ಮುಖದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸ್ಫೋರ್ಟ್ಸ್ ಶೂ ವಿತರಿಸಿದರು. ಬಳಿಕ ಮಾತನಾಡಿದ ಅವರು, ಕೆಲವು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕ್ರೀಡಾ ಶೂ ಕೊಳ್ಳವ ಸಾಮರ್ಥ್ಯ ಇರುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದರು.
ಬುಧಿಯಾ ದಾಸ್ ಜೀವನಾಧಾರಿತ ಚಿತ್ರವಾಗಿರುವ ಬುಧಿಯಾ ಸಿಂಗ್-ಬಾರ್ನ್ ಟು ರನ್ ಚಿತ್ರದಲ್ಲಿ ಮನೋಜ್ ಬಾಜಪೇಯ್ ಅಭಿನಯಿಸಿದ್ದಾರೆ.
2006ರಲ್ಲಿ ಪುರಿಯಿಂದ ಭುವನೇಶ್ವರದವರೆಗೆ ಸುಮಾರು 65 ಕಿ.ಮೀ ಓಡುವ ಮೂಲಕ ಬುಧಿಯಾ ಲಿಮ್ಕಾ ದಾಖಲೆ ನಿರ್ಮಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ