501ನೇ ಸಿನೆಮಾ ಚಿತ್ರೀಕರಣದಲ್ಲಿ ಅನುಪಮ್ ಖೇರ್!

ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ತಮ್ಮ ವೃತ್ತಿಜೀವನದಲ್ಲಿ 500 ಸಿನೆಮಾಗಳ ಮೈಲಿಗಲ್ಲು ದಾಟಿ ಈಗ 501ನೇ ಸಿನೆಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಲಿವುಡ್ ನಟ ಅನುಪಮ್ ಖೇರ್
ಬಾಲಿವುಡ್ ನಟ ಅನುಪಮ್ ಖೇರ್
Updated on
ಮುಂಬೈ: ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ತಮ್ಮ ವೃತ್ತಿಜೀವನದಲ್ಲಿ 500 ಸಿನೆಮಾಗಳ ಮೈಲಿಗಲ್ಲು ದಾಟಿ ಈಗ 501ನೇ ಸಿನೆಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
1984 ರಲ್ಲಿ ಮಹೇಶ್ ಭಟ್ ನಿರ್ದೇಶನದ 'ಸಾರಾಂಶ್'ನಲ್ಲಿ ಮಗನನ್ನು ಕಳೆದುಕೊಂಡ ನಿವೃತ್ತ ಮಧ್ಯಮ ವರ್ಗದ ಮಹಾರಾಷ್ಟ್ರದ ವ್ಯಕ್ತಿಯ ಪಾತ್ರ ಮಾಡಿದ್ದಾಗ ಅನುಪಮ್ ಖೇರ್ ಅವರಿಗ್ 28 ವರ್ಷ. ಆಗ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದಿಂದ ಪದವಿ ಪಡೆದು ಹೊರಬಂದಿದ್ದರು. 
ತಮ್ಮ ಮುಂದಿನ ಸಿನೆಮಾದ ಬಗ್ಗೆ ಹೆಚ್ಚು ಹೇಳಿಕೊಳ್ಳದ ಅನುಪಮ್ ಖೇರ್ "ನನ್ನ 501 ನೇ ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನನ್ನ ವೃತ್ತಿಜೀವನದ ಮಧ್ಯವಿರಾಮದ ನಂತರದ ಮೊದಲ ಸಿನೆಮಾ ಇದು. ಆದುದರಿಂದ ಈ ಮೊದಲ ಸಿನೆಮಾಗೆ ನಿಮ್ಮ ಹಾರೈಕೆಗಳು ಬೇಕು" ಎಂದು ಸೋಮವಾರ ರಾತ್ರಿ ಅನುಪಮ್ ಟ್ವೀಟ್ ಮಾಡಿದ್ದಾರೆ. 
'ತೇಜಾಬ್', 'ರಾಮ್ ಲಖನ್', 'ಚಾಂದನಿ', '1942 ಎ ಲವ್ ಸ್ಟೋರಿ', 'ದಿಲ್ವಾಲೆ ದುನಿಯಾ ಲೇಜಾಯೆಂಗೆ' 'ಹಮ್ ಆಪ್ಕೆ ಹೇ ಕೌನ್' ಮುಂತಾದ ಜನಪ್ರಿಯ ಸಿನೆಮಾಗಳಲ್ಲಿ ಖೇರ್ ನಟಿಸಿದ್ದಾರೆ. 
ರಂಗಾಸಕ್ತ, ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ನಾಟಕಗಳು, ಸಿನೆಮಾಗಳು, ಕಿರುತೆರೆಯಲ್ಲಿ ಸಮಾನ ಆಸಕ್ತಿಯಿಂದ ತೊಡಗಿಸಿಕೊಂಡಿರುವುದಲ್ಲದೆ 'ಆಕ್ಟರ್ ಪ್ರಿಪೇರ್ಸ್' ಎಂಬ ನಟನ ಶಾಲೆಯನ್ನು ನಡೆಸುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com