
ನವದೆಹಲಿ: ನಿಮ್ಮ ವಿವಾಹ ಯಾವಾಗ ಎಂದು ಪ್ರತಿಸಲ ಕೇಳುತ್ತಿದ್ದ ಪ್ರಶ್ನೆಗೆ ಸಲ್ಮಾನ್ ಖಾನ್ ತಮಾಷೆಯಾಗಿಯೇ ಉತ್ತರ ನೀಡುತ್ತಿದ್ದರು, ಸಲ್ಲು ವಿವಾಹವನ್ನು ನೋಡಬೇಕೆಂದು ಕಾದು ಕುಳಿತಿದ್ದ ಬಾಲಿವುಡ್ ಮಂದಿ ಹಾಗೂ ಅವರ ಅಭಿಮಾನಿಗಳಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.
ಈಗಾಗಲೇ ನಟ ಸಲ್ಮಾನ್ ಖಾನ್ ರೋಮೇನಿಯಾ ಬ್ಯೂಟಿ ಲುಲಿಯಾ ವಂತುರ್ ಜತೆ ಸಲ್ಮಾನ್ ವಿವಾಹ ಮಾಡಿಕೊಂಡಿದ್ದಾರಂತೆ. ಹೀಗಂತ ರೊಮೇನಿಯಾದ ಟ್ಯಾಬ್ಲಾಯ್ಡ್ ಪ್ರಕಟಿಸಿದೆ. ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಲುಲಿಯಾ ತನ್ನ ಆಪ್ತರ ಜತೆ ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ ಸಲ್ಮಾನ್ ಮಾತ್ರ ಈ ವರೆಗೂ ಈ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ. ಗುಟ್ಟನ್ನು ರಟ್ಟು ಮಾಡಲು ಬಿಟ್ಟಿಲ್ಲ. ಎಲ್ಲಾ ಊಹಾಪೋಹಗಳಿಗೂ ಸಲ್ಮಾನ್ ಅವರೇ ತೆರೆ ಎಳೆಯಬೇಕಿದೆ.
Advertisement