ಸುದೀಪ್ ಹೊಗಳುವ ಭರದಲ್ಲಿ ವಿಷ್ಣು, ರಜನಿಗೆ ರಾಮ್ ಗೋಪಾಲ ವರ್ಮಾ ಅವಮಾನ

ಸುದೀಪ್‌ ಅಭಿನಯದ "ಕೋಟಿಗೊಬ್ಬ 2' ಚಿತ್ರವನ್ನು ಹೊಗಳುವ ಭರದಲ್ಲಿ ಹಿರಿಯ ನಟರಾದ ಡಾ. ವಿಷ್ಣುವರ್ಧನ್‌ ಮತ್ತು ರಜನೀ ಕಾಂತ್..
ಸುದೀಪ್, ವಿಷ್ಣು ವರ್ಧನ್, ರಜನೀ ಕಾಂತ್ ಮತ್ತು ರಾಮ್ ಗೋಪಾಲ್ ವರ್ಮಾ
ಸುದೀಪ್, ವಿಷ್ಣು ವರ್ಧನ್, ರಜನೀ ಕಾಂತ್ ಮತ್ತು ರಾಮ್ ಗೋಪಾಲ್ ವರ್ಮಾ
Updated on

ಮುಂಬೈ: ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ್ ಸುದೀಪ್‌ ಅಭಿನಯದ "ಕೋಟಿಗೊಬ್ಬ 2' ಚಿತ್ರವನ್ನು ಹೊಗಳುವ ಭರದಲ್ಲಿ ಹಿರಿಯ ನಟರಾದ ಡಾ. ವಿಷ್ಣುವರ್ಧನ್‌ ಮತ್ತು ರಜನೀ ಕಾಂತ್ ಅವರನ್ನು ಅವಮಾನ ಪಡಿಸಿದ್ದಾರೆ.

ನಟನೆಯಲ್ಲಿ ಸುದೀಪ್‌ ರಷ್ಟು  ಪ್ರಬುದ್ಧತೆ ಡಾ.ವಿಷ್ಣುವರ್ಧನ್‌ ಅವರಿಗಿಲ್ಲ ಎಂದು ವರ್ಮಾ ಮಾಡಿರುವ ಟ್ವೀಟ್  ಆಕ್ರೋಶಕ್ಕೆ ಕಾರಣವಾಗಿದೆ.

ಕೋಟಿಗೊಬ್ಬ 2 ಚಿತ್ರ ನೋಡಿದೆ. ನಿಜವಾಗಿ ಸುದೀಪ್‌ ಅವರು ಹೆಸರನ್ನು ಬದಲಿಸಿ, ಕಿಚ್ಚ ಸುದೀಪ್‌ನಿಂದ ರಜನಿ ಸುದೀಪ್‌ ಎಂದಿಡಬೇಕು' ಎಂದಿದ್ದಾರೆ. ಅಲ್ಲದೇ "ರಜನಿ ಅವರಾದರೆ ಒಂದೇ ರೀತಿಯ ಅಭಿನಯಗಳಲ್ಲಿ ಮಿಂಚುತ್ತಾರೆ. ಆದರೆ ನೀವು ವಿವಿಧ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದೀರಿ. "ಈಗ', "ಕೋಟಿಗೊಬ್ಬ 2' ಇದಕ್ಕೆ ಉದಾಹರಣೆ ಎಂದು ಹೇಳಿದ್ದಾರೆ.

ಸುದೀಪ್  ಅಭಿನಯವನ್ನು ವಿಷ್ಣುವರ್ಧನ್‌ ಅವರ ನಟನೆಯೊಂದಿಗೆ ಹೋಲಿಸಿ ನೋಡಿದರೇ  ವಿಷ್ಣು ಅವರ ನಟನೆ ಪ್ರಬುದ್ಧವಾಗಿಲ್ಲ. ಇದನ್ನು ಅವರ ಅಭಿಮಾನಿಗಳು ಒಪ್ಪದೇ ಇರಬಹುದು ಎಂದು ಹೇಳಿದ್ದಾರೆ. ಅಲ್ಲದೇ, "ಸುದೀಪ್‌ ಅವರೇ ನೀವು ರೊಬೋಟ್‌ ಚಿತ್ರದಲ್ಲಿ ಕನಸಲ್ಲೂ ನಟಿಸಬಹುದು. ಆದರೆ ರಜನಿಕಾಂತ್‌ ಗೆ ಕನಸಿನಲ್ಲೂ "ಈಗ'ದಲ್ಲಿ ನಟಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

@KicchaSudeep I just saw kotigobba 2 and I honestly think u shud change ur name from Kiccha Sudeepa to Rajni Sudeepa..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com