ಹಿಮೇಶ್ ರೇಶ್ಮಿಯಾ ಮತ್ತು ಪತ್ನಿ ಕೋಮಲ್
ಬಾಲಿವುಡ್
22 ವರ್ಷದ ದಾಂಪತ್ಯದಲ್ಲಿ ಬಿರುಕು: ಗಾಯಕ ಹಿಮೇಶ್ ರೇಶ್ಮಿಯಾ ಮತ್ತು ಪತ್ನಿ ಕೋಮಲ್ ವಿಚ್ಛೇದನ
2016ನೇ ವರ್ಷಾಂತ್ಯದಲ್ಲಿ ಮತ್ತೊಂದು ಸೆಲಬ್ರೆಟಿ ಜೋಡಿ ವಿಚ್ಛೇದನಕ್ಕೆ ಮುಂದಾಗಿದೆ. ಬಾಲಿವುಡ್ ಗಾಯಕ ಹಾಗೂ ಸಂಗೀತ ಸಂಯೋಜಕ ಹಿಮೇಶ್ ರೇಶ್ಮಿಯಾ ...
ನವದೆಹಲಿ: 2016ನೇ ವರ್ಷಾಂತ್ಯದಲ್ಲಿ ಮತ್ತೊಂದು ಸೆಲಬ್ರೆಟಿ ಜೋಡಿ ವಿಚ್ಛೇದನಕ್ಕೆ ಮುಂದಾಗಿದೆ. ಬಾಲಿವುಡ್ ಗಾಯಕ ಹಾಗೂ ಸಂಗೀತ ಸಂಯೋಜಕ ಹಿಮೇಶ್ ರೇಶ್ಮಿಯಾ ಮತ್ತು ಪತ್ನಿ ಕೋಮಲ್ ತಮ್ಮ 22 ವರ್ಷದ ಸುದೀರ್ಘ ದಾಂಪತ್ಯಕ್ಕೆ ನಾಂದಿ ಹಾಡಲು ಹೊರಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಪತ್ನಿ ಕೋಮಲ್ ಜೊತೆಗಿನ ಬಾಂಧವ್ಯ ಕಳೆದು ಕೊಳ್ಳಲು ನಿರ್ಧರಿಸಿರುವ ಹಿಮೇಶ್ ರೇಶ್ಮಿಯಾ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಜೀವನದಲ್ಲಿ ಕೆಲವೊಮ್ಮೆ ಪರಸ್ಪರ ಗೌರವ ಬಹಳ ಮುಖ್ಯವಾಗುತ್ತದೆ, ನಮ್ಮ ಸಂಬಂಧಕ್ಕೆ ಗೌರವ ನೀಡಲು ಬಯಸಿದ್ದು ನಾನು ಮತ್ತು ಕೋಮಲ್ ಪರಸ್ಪರ ಸಹಮತದ ಮೇರೆಗೆ ಬೇರ್ಪಡಲು ಬಯಸಿದ್ದೇವೆ, ನಮ್ಮ ಈ ನಿರ್ಧಾರವನ್ನು ನಮ್ಮ ಕುಟುಂಬಸ್ಥರು ಇದಕ್ಕೆ ಗೌರವಿಸುತ್ತಾಕೆ ಎಂದು ನಂಬಿದ್ದೇನೆ ಎಂದು ಹಿಮೇಶ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಹಿಮೇಶ್ ಪತ್ನಿ ಕೋಮಲ್ ಕೂಡ ನಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ