ಭಾರತೀಯ ಸಿನಿಮಾಗಳ ನಿಷೇಧ ತೆರವು: ಡಿ.19 ರಿಂದ ಪಾಕ್ ನಲ್ಲಿ ಚಿತ್ರ ಪ್ರದರ್ಶನ

ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಲು ಪಾಕಿಸ್ತಾನ ಚಿತ್ರ ಪ್ರದರ್ಶಕರ ಸಂಘ ...
ಫ್ರೀಕಿ ಅಲಿ ಪೊಸ್ಟರ್
ಫ್ರೀಕಿ ಅಲಿ ಪೊಸ್ಟರ್
Updated on

ನವದೆಹಲಿ: ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಲು ಪಾಕಿಸ್ತಾನ ಚಿತ್ರ ಪ್ರದರ್ಶಕರ ಸಂಘ ನಿರ್ಧರಿಸಿದೆ.

ಸೆಪ್ಟಂಬರ್ ತಿಂಗಳಲ್ಲಿ ನಡೆದಿದ್ದ ಉರಿ ಉಗ್ರರ ದಾಳಿಯಲ್ಲಿ ನಂತರ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.

ಡಿಸೆಂಬರ್ 19 ರಿಂದ ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ ಎಂದು ಸಿನಿಮಾ ಪ್ರದರ್ಶಕರ ಸಂಘದ  ಅಧ್ಯಕ್ಷ ಜೋರೈಶಿ ಲಾಶರಿ ಸ್ಪಷ್ಟ ಪಡಿಸಿದ್ದಾರೆ.ಸೊಹೈಲ್ ಖಾನ್ ನಿರ್ದೇಶನದ, ನವಾಜುದ್ದೀನ್ ಸಿದ್ದಿಕಿ, ಅರ್ಬಾಜ್ ಖಾನ್,  ಅಭಿನಯದ ಫ್ರೀಕಿ ಅಲಿ ಸಿನಿಮಾ ಪ್ರದರ್ಶನ ತೆರೆ ಕಾಣಲಿದೆ.

ಫ್ರೀಕಿ ಅಲಿ ಸಿನಿಮಾ ಬಿಡುಗಡೆ ನಂತರ ಅಲ್ಲಿನ ವಿತರಕರು ಹಾಗೂ ಸರ್ಕಾರದ ಪ್ರತಿಕ್ರಿಯೆ ನೋಡಿದ ನಂತರ ದಂಗಾಲ್ ಸಿನಿಮಾ ಬಿಡುಗಡೆಗೆ ಪ್ರಯತ್ನಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com