
ಮಲಯಾಳಂನ ಸೂಪರ್ ಹಿಟ್ ಒಪ್ಪಂ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವುದಾಗಿ ನಿರ್ದೇಶಕ ಪ್ರಿಯದರ್ಶನ್ ಘೋಷಿಸಿದ್ದು ಬಾಲಿವುಡ್ ನಟ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮೂಲ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದು ಇದೇ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಮಲಯಾಳಂನಲ್ಲಿ ದೊಡ್ಡ ಹಿಟ್ ಆಗಿತ್ತು. ಒಪ್ಪಂ ಚಿತ್ರ ತೆಲುಗಿನಲ್ಲಿ ಡಬ್ ಆಗಿದ್ದು ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ.
ಒಂದು ಕೊಲೆಯ ಸುತ್ತ ಸುತ್ತುವ ಚಿತ್ರ ಇದಾಗಿದ್ದು, ಇದರಲ್ಲಿ ಓರ್ವ ಕುರುಡ ಕೊಲೆ ಮಾಡಿವನನ್ನು ಹೇಗೆ ಪತ್ತೆ ಮಾಡಿ ಕೊಲ್ಲುತ್ತಾನೆ ಎಂಬದೇ ಚಿತ್ರದ ಕಥಾವಸ್ತುವಾಗಿದೆ.
ಅಜಯ್ ದೇವಗನ್ ಅವರ ಶಿವಾಯ್ ಚಿತ್ರ ಪ್ರೇಕ್ಷಕರ ಒಲವು ಗಳಿಸುವುದರಲ್ಲಿ ಸೋತಿತ್ತು. ಶಿವಾಯ್ ಗು ಮುನ್ನ ಅಜಯ್, ಮೋಹನ್ ಲಾಲ್ ಅಭಿಯಿಸಿದ್ದ ಮಲಯಾಳಂನ ದೃಶ್ಯಂ ಚಿತ್ರದ ಹಿಂದಿ ರೀಮೆಕ್ ನಲ್ಲಿ ನಟಿಸಿದ್ದರು.
Advertisement