ಮುಂಗಾರು ಮಳೆಗೆ ದಶಕ: ಮುಗುಳುನಗೆ ಸೆಟ್ ನಲ್ಲಿ ಸಂಭ್ರಮಾಚರಣೆ

ಮಳೆ, ಮಳೆ ಮಳೆ ಹತ್ತು ವರ್ಷಗಳ ಹಿಂದೆ ಯಾರ ಬಾಯಿಯಲ್ಲಿ ಕೇಳಿದರೂ ಮುಂಗಾರು ಮಳೆಯದ್ದೇ ಮಾತು ಅಂತ ಮೋಡಿ ಮಾಡಿತ್ತು ಮುಂಗಾರು ಮಳೆ ಚಿತ್ರ...
ಮುಗುಳುನಗೆ ಚಿತ್ರತಂಡ
ಮುಗುಳುನಗೆ ಚಿತ್ರತಂಡ
ಮಳೆ, ಮಳೆ ಮಳೆ ಹತ್ತು ವರ್ಷಗಳ ಹಿಂದೆ ಯಾರ ಬಾಯಿಯಲ್ಲಿ ಕೇಳಿದರೂ ಮುಂಗಾರು ಮಳೆಯದ್ದೇ ಮಾತು ಅಂತ ಮೋಡಿ ಮಾಡಿತ್ತು ಮುಂಗಾರು ಮಳೆ ಚಿತ್ರ. ಮಹಾಮಳೆಯ ರಭಸಕ್ಕೆ ಸ್ಯಾಂಡಲ್ವುಡ್ ದಾಖಲೆಗಳಲ್ಲ ಧೂಳಿಪಟವಾಗಿದ್ದವು. ಅಂತ ಮುಂಗಾರು ಮಳೆ ಚಿತ್ರ ಇದೀಗ ದಶಕದ ಸಂಭ್ರಮದಲ್ಲಿದೆ. ಹೌದು ಕಣ್ರೀ ಮುಂಗಾರು ಮಳೆ ಚಿತ್ರ ಬಿಡುಗೆಡೆಯಾಗಿ ಹತ್ತು ವರ್ಷಗಳು ಕಳೆದಿವೆ. ಆದರೂ ಎಂದಿಗೂ ಮರೆಯಲಾಗದ ಸೋನೆ ಮಳೆಯಾಗಿ ಉಳಿದಿದೆ. 
2006ರ ಡಿಸೆಂಬರ್ 29ರಂದು ಥಿಯೇಟರ್ ಗಳಲ್ಲಿ ಮುಂಗಾರು ಮಳೆ ಸುರಿಯಲಾರಂಭಿಸಿತು. ಮಳೆಯ ರಭಸಕ್ಕೆ ಹಲವು ಪ್ರತಿಭೆಗಳು ಸ್ಯಾಂಡಲ್ವುಡ್ ಗೆ ಪರಿಚಯವಾದವು. ಎರಡು ಚಿತ್ರಗಳನ್ನು ಮಾಡಿದ್ದರೂ ಯಶಸ್ಸು ಕಾಣದ ಯೋಗರಾಜ್ ಭಟ್ ಸ್ಯಾಂಡಲ್ವುಡ್ ನ ಸ್ಟಾರ್ ನಿರ್ದೇಶಕರಾದರು. ಗಣೇಶ್ ಗೋಲ್ಡನ್ ಸ್ಟಾರ್ ಆದರೂ. ಹೀಗೆ ಹಲವ ಬದುಕಿಗೆ ಬೆಳಕಾಗಿದ್ದು ನಿಜಕ್ಕೂ ಮುಂಗಾರುಮಳೆಯ ಅಬ್ಬರ. 
ಇದೀಗ ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಮತ್ತೇ ಹತ್ತು ವರ್ಷಗಳ ಬಳಿಕ ಜತೆಯಾಗಿ ಮುಗುಳುನಗೆ ಚಿತ್ರ ಮಾಡುತ್ತಿದ್ದಾರೆ. ಅಂತೆ ಮುಗುಳುನಗೆ ಶೂಟಿಂಗ್ ನಲ್ಲಿ ಬಿಜಿ ಆಗಿರುವ ಇವರಿಬ್ಬರು ಮುಂಗಾರು ಮಳೆಯ ದಶಕದ ಸಂಭ್ರಮವನ್ನು ಕೇಕ್ ತತ್ತರಿಸುವ ಮೂಲಕ ಸಂಭ್ರಮಿಸಿದರು. 
ಆ ಪ್ರೀತಂ, ನಂದಿನಿ, ಆ ರಾಸ್ಕೆಲ್ ದೇವದಾಸು, ಬಿಕನಾಸಿ ಮಳೆ, ಜೋಗ್ ಜಲಪಾತ, ಗುಂಗಿಡಿಸೋ ಆ ಹಾಡು...ಮರೆಯಕ್ಕೆ ಆಗದ ಡೈಲಾಗ್ ಗಳು ಅಂದು ನಿಜಕ್ಕೂ ಚಿತ್ರ ರಚಿಕರ ಮನಗೆದ್ದಿತ್ತು. 
ರೀ ಮನುಷ್ಯಗೆ ಬ್ಯಾಡ್ ಟೈಮ್ ಶುರು ಆದ್ರೆ, ತಲೆ ಕೆರ್‌ಕೊಂಡು, ತಲೆಲಿ ಗಾಯ ಆಗಿ, ಗಾಯ ಕ್ಯಾನ್ಸರ್ ಆಗಿ ಡಾಕ್ಟರ್ ತಲೇನೇತೆಗೀಬೇಕು ಅಂತಾರೆ ಅಂಥದ್ರಲ್ಲಿ ನಾನು ಈ ದಿಲ್.. ಹೃದಯ ಹಾರ್ಟ್ ಅಂತಾರಲ್ಲ ..ಅಲ್ಲಿಗೆ ಕೈ ಹಾಕಿ ಪರ ಪರ ಅಂತ ಕೆರ್‌ಕೊಂಡ್ ಬಿಟ್ಟಿದೀನಿಕಣ್ರೀ.. ನಿಮ್ ನಗು,ನಿಮ್ ಬ್ಯೂಟಿ,ನಿಮ್ ವಾಯ್ಸ್,ನಿಮ್ ಕೂದ್ಲೂ , ನಿಮ್ ನೋಟ,ಈ ಬಿಕ್‌ನಾಸಿ ಮಳೆ,ನಿಮ್ ಗೆಜ್ಜೆ ಸದ್ದು ವಾಚು, ಆ ರಾಸ್ಕಲ್ ದೇವದಾಸ, ಗಂಟೆ ಸದ್ದು ಎಲ್ಲ ಮೀಕ್ಶ್ ಆಗಿ ನನ್ ಲೈಫಲ್ಲೇ ರಿಪೇರಿ ಮಾಡಕ್ಕಾಗ್ದೆ ಇರೋ ಅಷ್ಟು ಗಾಯ ಮಾಡಿದೆ ಕಣ್ರೀ...ನಂಗೊತ್ತಾಗೊಯ್ತು ಕಣ್ರೀ ನೀವ್ ನಂಗೆ ಸಿಗಲ್ಲ ಅಂತ ಬಿಟ್ಕೋಟ್ಬಿಟ್ಟೆ ಕಣ್ರೀ..ನಿಮ್ಮನ್ನ ಪಠಾಯ್ಸಿ ಲೋಫರ್ ಅನಿಸ್ಕೋಳೋದಕ್ಕಿಂತ ಒಬ್ಬ ಡೀಸೆಂಟ್ ಹುಡುಗನಾಗಿ ಇದ್ಬೀಟ್ರೆ ಸಾಕು ಅನ್ನಿಸ್ಬಿಟ್ಟಿದೆಕಣ್ರೀ.. ಆದ್ರೆ ಒಂದ್ ವಿಷ್ಯ ತಿಳ್ಕೊಲ್ಳಿ ನನ್ನಷ್ಟ್ತು ನಿಮ್ಮನ್ನ ಇಷ್ಟ ಪಡೋರು ಈ ಭೂಮೀಲ್ ಯಾರು ಸಿಗಲ್ಲ ಕಣ್ರೀ.....

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com