ನವದೆಹಲಿ : ತನ್ನ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆತನಿಗೆ ಐದು ಲಕ್ಷ ರೂ.ಗಳ ಪರಿಹಾರ ಕೊಡುವುದಾಗಿ ಬಾಲಿವುಡ್ ನಟ ಗೋವಿಂದ ತಿಳಿಸಿದ್ದಾರೆ.
ಕೇವಲ ಪರಿಹಾರ ನೀಡಿದರೇ ಸಾಲದು, ಪರಿಹಾರದ ಹಣದ ಜೊತೆಗೆ ಅಭಿಮಾನಿಯ ಬಳಿ ಕ್ಷಣೆ ಕೇಳಬೇಕೆಂದು ಸುಪ್ರಿಂಕೋರ್ಟ್ ಸೂಚಿಸಿದೆ. ಇದಕ್ಕಾಗಿ ನಟ ಗೋವಿಂದ ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.
2008ರಲ್ಲಿ ಮನೀ ಹೈ ತೋ ಹನಿ ಹೈ ಎಂಬ ಚಿತ್ರದ ಚಿತ್ರೀಕರಣ ಸಮಯದಲ್ಲಿ ಈ ಘಟನೆ ನಡೆದಿತ್ತು, ಸಂತೋಷ್ ರಾಯ್ ಪೂರ್ವಾನುಮತಿ ಪಡೆಯದೇ ಚಿತ್ರೀಕರಣದ ಸೆಟ್ಟಿಗೆ ಬಂದುದಲ್ಲದೆ ನೃತ್ಯಗಾತಿಯರಾಗಿ ಬಂದಿದ್ದ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಇದರಿಂದ ಕುಪಿತರಾದ ನಟ ಗೋವಿಂದ, ಆತನಿಗೆ ಕಪಾಳಮೋಕ್ಷ ಮಾಡಿದ್ದರು.
ತನ್ನ ಮೇಲೆ ನಟ ಗೋವಿಂದ ಅವರು ಹಲ್ಲೆ ಮಾಡಿ ಕ್ರಿಮಿನಲ್ ಬೆದರಿಕೆ ಒಡ್ಡಿದರೆಂದು ಸಂತೋಷ್ ರಾಯ್ 2009 ರಲ್ಲಿ ಬಾಂಬೇ ಹೈಕೋರ್ಟಿಗೆ ದೂರು ನೀಡಿದ್ದರು. 2013ರಲ್ಲಿ ಬಾಂಬೇ ಹೈಕೋರ್ಟ್ ಈ ದೂರನ್ನು ವಜಾ ಮಾಡಿತ್ತು. ಅದಾಗಿ ಸಂತೋಷ್ 2014ರಲ್ಲಿ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದರು. ಈಗ ಅವರಿಗೆ ಜಯ ಸಿಕ್ಕಿದೆ.
Advertisement