ನನಗೆ ಮದುವೆ ವಯಸ್ಸು ಮೀರಿತು, ಮೂರು ಮಕ್ಕಳು ಬೇಕು: ಸಲ್ಮಾನ್ ಖಾನ್

ಮದುವೆಯಾಗುವ ವಯಸ್ಸು ದಾಟಿಹೋಗಿದ್ದು, ನಾನು ಮದುವೆಯಾಗೋದು ಅನುಮಾನ ಎಂದು ಬಾಲಿವುಡ್‌ನ‌ ಖ್ಯಾತ ನಟ ಸಲ್ಮಾನ್‌ ಖಾನ್‌ ಹೇಳಿದ್ದಾರೆ....
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on

ಮುಂಬೈ: ಮದುವೆಯಾಗುವ ವಯಸ್ಸು ದಾಟಿಹೋಗಿದ್ದು, ನಾನು ಮದುವೆಯಾಗೋದು ಅನುಮಾನ ಎಂದು ಬಾಲಿವುಡ್‌ನ‌ ಖ್ಯಾತ ನಟ ಸಲ್ಮಾನ್‌ ಖಾನ್‌ ಹೇಳಿದ್ದಾರೆ.

ಪುಣೆಯ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಭಾಗಿಯಾಗಿದ್ದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಲ್ಮಾನ್‌, ನನಗೆ ಮದುವೆಯಾಗುವ ವಯಸ್ಸು ಮೀರಿದೆ. ಈ ಹಿಂದೆ ತಮ್ಮ ಸಹೋದರಿ ಅರ್ಪಿತಾ ಮದುವೆ ನಂತರ ತಾನು ವಿವಾಹವಾಗುವುದಾಗಿ ಹೇಳಿದ್ದೆ, ಈಗ ಹೇಳಲು ಯಾವುದೇ ಕಾರಣವಿಲ್ಲ. ನಾನು ಮದುವೆಯಾಗೋದು ಅನುಮಾನ. ಆದರೆ ನನಗೆ ಮೂರು ಮಕ್ಕಳನ್ನು ಸಾಕುವ ಆಸೆ ಇದೆ. ಮದುವೆಯಾಗದೇ ಮಕ್ಕಳನ್ನು ಸಾಕುವುದು ಕಷ್ಟ, ಆದರೆ ಇದನ್ನು ನಾನು ಯಶಸ್ವಿಯಾಗಿ ನಿರ್ವಹಿಸಬಲ್ಲೆ ಎಂಬ ಆತ್ಮ ವಿಶ್ವಾಸವಿದೆ, ಎಂದು  ತಮ್ಮ ಮನದಾಳದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಮಾಜಿ ಪ್ರೇಯಸಿ ಕತ್ರೀನಾ ಕೈಫ್ ಅವರನ್ನು ಮನಸಾರೆ ಹೊಗಳಿದ ಸಲ್ಮಾನ್‌, ಆಕೆಯಷ್ಟು ಶ್ರಮವಹಿಸಿ ಕೆಲಸ ಮಾಡುವ ನಟಿಯರನ್ನು ನಾನು ನನ್ನ ಜೀವನದಲ್ಲೇ ನೋಡಿಲ್ಲ. ಒಂದು ಲೆಕ್ಕದಲ್ಲಿ ಆಕೆ ಕೂಲಿ ಇದ್ದಂತೆ. ಆಕೆ ಕಷ್ಟ ಪಟ್ಟು ಕೆಲಸ ಮಾಡುವುದನ್ನು ನನ್ನಿಂದ ಕಲಿತಿದ್ದಾಳೆ ಎಂದದು ಸಲ್ಮಾನ್ ಹೇಳಿದ್ದಾರೆ. ಬೇರೆಯವರು ಆಕೆಯನ್ನು ನೋಡಿ ಕಲಿಯಬೇಕು ಎಂದು ಹಾಡಿ ಹೊಗಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com