ಸೋನಮ್ ಬಹಳಷ್ಟು ಸುಧಾರಿಸಿಕೊಳ್ಳಬೇಕಿದೆ: ಅನಿಲ್ ಕಪೂರ್

ತಮ್ಮ ಮಗಳು ಸೋನಮ್ ಕಪೂರ್ ನಟನೆಯಲ್ಲಿ ಇನ್ನೂ ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ ಎಂದಿದ್ದಾರೆ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್
ನೀರ್ಜಾ ಸಿನೆಮಾದಲ್ಲಿ ಸೋನಮ್ ಕಪೂರ್
ನೀರ್ಜಾ ಸಿನೆಮಾದಲ್ಲಿ ಸೋನಮ್ ಕಪೂರ್
Updated on

ಮುಂಬೈ: ತಮ್ಮ ಮಗಳು ಸೋನಮ್ ಕಪೂರ್ ನಟನೆಯಲ್ಲಿ ಇನ್ನೂ ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ ಎಂದಿದ್ದಾರೆ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್.

"ಪ್ರಪಂಚದಲ್ಲಿ ನೀವು ಅತ್ಯುತ್ತಮ ನಟ ಅಥವಾ ನಟಿಯಾಗಿರಬಹುದು ಆದರೆ ಕಲಿಯುವುದಕ್ಕೆ ಸದಾ ಇರುತ್ತದೆ. ಇದು ಸೋನಮ್ ಗೂ ಕೂಡ ಸಲ್ಲುವ ಮಾತು. ಅವಳ ಪ್ರದರ್ಶನಕ್ಕೆ ಎಷ್ಟೇ ಹೊಗಳಿಕೆ ಬರಲಿ, ಯಾರು ಏನೇ ಹೇಳಲಿ ಅವಳೂ ಇನ್ನೂ ಸುಧಾರಿಸಿಕೊಳ್ಳಬೇಕಿದೆ" ಎಂದು ಜೀ ಸಿನೆ ಪ್ರಶಸ್ತಿ ಸಮಾರಂಭದ ಸಮಯದಲ್ಲಿ ಅನಿಲ್ ಅಭಿಪ್ರಾಯ ಪಟ್ಟಿದ್ದಾರೆ.

"ನಟ ಎಂದೆಂದಿಗೂ ವಿದ್ಯಾರ್ಥಿ. ನಟನೆ ಎಂಬದು ಕಲಿಕೆಯ ಸಾಗರ. ಅದರ ಸಾರವನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವೇ ಇಲ್ಲ. ನಟ ಸದಾ ಕಲಿಯುತ್ತಲೇ ಇರಬೇಕು ಮತ್ತು ಮುಂದಿನ ಬಾರಿ ಇನ್ನೂ ಹೆಚ್ಚಿನ ಶ್ರಮವಹಿಸಬೇಕು" ಎಂದು ವೆಲ್ಕಂ ಬ್ಯಾಕ್ ನಟ ಹೇಳಿದ್ದಾರೆ.

ಸೋನಮ್ ಅವರ ಇತ್ತೀಚಿನ ಚಿತ್ರ ನೀರ್ಜಾ ಬಗ್ಗೆ ಮಾತನಾಡಿದ ತಂದೆ ಕಪೂರ್ "... ಇಡಿ ಕುಟುಂಬ ಸಿನೆಮಾದ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಈ ಸಿನೆಮಾವನ್ನು ನೀರ್ಜಾ ಅವರೇ ಆಶಿರ್ವದಿಸಿದ್ದಾರೆ ಎಂದೆನಿಸುತ್ತದೆ. ಸಿನೆಮಾಗೆ ಒಳ್ಳೆ ಹೆಸರು ಬರುವುದಕ್ಕೆ ಅವರೇ ಕಾರಣ" ಎಂದಿದ್ದಾರೆ.

೧೯೮೬ರ ವಿಮಾನ ಅಪಹರಣದ ವೇಳೆ ಪ್ರಯಾಣಿಕರ ಪ್ರಾಣ ಉಳಿಸಲು ಕಾರಣರಾಗಿ, ತಮ್ಮ ಪ್ರಾಣ ಕಳೆದುಕೊಂಡ ನೀರ್ಜಾ ಭಾನೋಟ್ ಅವರ ಬಯೋಪಿಕ್ ಈ ಸಿನೆಮಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com