
ಮುಂಬೈ: ನಟ ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಹಿರಿಯ ನಟ ಹಾಗೂ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಅವರು ಇನ್ನು ಮುಂದೆ ಸಂಜಯ್ ದತ್ ಲಗೇ ರಹೋ ಮುನ್ನಬಾಯಿ ರೀತಿ ಗಾಂಧೀಗಿರಿ ಮಾಡಬೇಕು ಎಂದು ಹೇಳಿದ್ದಾರೆ.
ಯೆರವಾಡ ಸೆಂಟ್ರಲ್ ಜೈಲಿನಿಂದ ಸಂಜಯ್ ದತ್ ಬಿಡುಗಡೆಗಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರು ಎದುರು ನೋಡುತ್ತಿದ್ದರು ಎಂದು ಶತ್ರುಘ್ನ ಸಿನ್ಹಾ ಟ್ವೀಟಿಸಿದ್ದಾರೆ.
1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದ 56 ವರ್ಷ ವಯಸ್ಸಿನ ಸಂಜಯ್ ದತ್ ಅವರು 42 ತಿಂಗಳು ಶಿಕ್ಷೆ ಅನುಭವಿಸಿದ್ದು, ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದರು.
Advertisement