
ಬಾಲಿವುಡ್ ನಟಿ ಐಶ್ವರ್ಯ ರೈ ಅಭಿನಯದ ಸರ್ಬಜಿತ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
ಐಶ್ವರ್ಯ ರೈ ಸಮ್ಮುಖದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ನಿತೀನ್ ಗಡ್ಕರಿ ಚಿತ್ರದ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಿದರು.
ಚಲನಚಿತ್ರ ವಿಮರ್ಶಕ ತರ್ಣ ಆದರ್ಶ ತಮ್ಮ ಟ್ವೀಟರ್ ನಲ್ಲಿ ಸರ್ಬಜಿತ್ ಚಿತ್ರದ ಅಧಿಕೃತ ಪೋಸ್ಟರ್ ಅನ್ನು ಅಪಲೋಡ್ ಮಾಡಿದ್ದಾರೆ.
ಒಮುಂಗ್ ಕುಮಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಾಕಿಸ್ತಾನ ಜೈಲಿನಲ್ಲಿ ಕೈದಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ಸರ್ಬಜಿತ್ ಸಿಂಗ್ ಜೀವನಧಾರಿತ ಚಿತ್ರ ಇದಾಗಿದ್ದು, ಸರ್ಬಜಿತ್ ಸಿಂಗ್ ಪಾತ್ರದಲ್ಲಿ ರಣದೀಪ್ ಹೂಡಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಪಾಕಿಸ್ತಾನದ ವಕೀಲರಾಗಿ ದರ್ಶನ್ ಕುಮಾರ್ ಹಾಗೂ ಸರ್ಬಜಿತ್ ಸಿಂಗ್ ಪತ್ನಿಯಾಗಿ ರಿಚಾ ಚಡ್ಡಾ ಕಾಣಿಸಿಕೊಳ್ಳುತ್ತಿದ್ದಾರೆ.
2016ರ ಮೇ 19ಕ್ಕೆ ಚಿತ್ರ ತೆರೆಗೆ ಬರಲಿದ್ದು, ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ತೆರೆಕಾಣಲಿದೆ.
Advertisement