ಮೀಸೆಯಿಲ್ಲದಿದ್ದರೆ ನಗ್ನನಾದಂತೆ ಅನ್ನಿಸುತ್ತದೆ ಎಂದ ರಣವೀರ್
'ಬಾಜಿರಾವ್ ಮಸ್ತಾನಿ' ಸಿನೆಮಾದಲ್ಲಿ ಬಹುತೇಕ ಬೋಳು ತಲೆಯಲ್ಲಿ ನಟಿಸಿದರೂ ನಟ ರಣವೀರ್ ಸಿಂಗ್ ದೊಡ್ಡ ಮೀಸೆಯನ್ನಂತೂ ಉಳಿಸಿಕೊಂಡಿದ್ದರು. ಮುಖದ ಮೇಲಿನ ಮೀಸೆಯ ಕೂದಲಿನ ಬಗ್ಗೆ ಅತಿ ಮೋಹದಿಂದಿದ್ದ ರಣವೀರ್ ಅದನ್ನು ತೆಗೆದಿದ್ದು ತನ್ನ ಗೆಳತಿ ದೀಪಿಕಾ ಪಡುಕೋಣೆ ಎಂದಿದ್ದಾರೆ. "ಆ ಕೂದಲು ತೆಗೆಯಲು ನನ್ನ ಹೃದಯ ಬಿಡಲಿಲ್ಲ" ಎಂದಿದ್ದಾರೆ.
"ಮೀಸೆ ಕತ್ತರಿಸಲು ನನ್ನ ಕೈ ಮೇಲೇಳುತ್ತಿದ್ದಂತೆಯೇ ಕೆಳಗೆ ಬಂದುಬಿಡುತ್ತಿತ್ತು. ಹಾಗೆ ನೋಡಿದರೆ ದೀಪಿಕಾ ಕೂಡ ಅದಕ್ಕೆ ಪ್ರಯತ್ನಿಸಿದರೂ ಆದರೆ ಸಾಧ್ಯವಾಗಲಿಲ್ಲ. ಬೇಡ ಬೇಡ ಎಂದು ಬಡಿದುಕೊಳ್ಳುತ್ತಿದ್ದೆ. ಆದರೆ ಕೊನೆಗೂ ಅವರು ಕತ್ತರಿಸಿಹಾಕಿಬಿಟ್ಟರು. ಈಗ ಬಾಜಿ ರಾವ್ ಮಸ್ತಾನಿಯ ಸ್ಮರಣಿಕೆಯಾಗಿ ಅದನ್ನು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದ್ದೇನೆ" ಎಂದಿದ್ದಾರೆ ನಟ ರಣವೀರ್.
ಈಗ ಮೀಸೆ ಹೋಗಿಯಾಗಿ ಆಗಿದೆ. ಆದರೆ ಈ ನಷ್ಟದಿಂದ ರಣವೀರ್ ಈಗಲೂ ನೋವನ್ನು ಅನುಭವಿಸುತ್ತಿದ್ದಾರಂತೆ. "ನಾನು ನನ್ನ ಮೀಸೆಯನ್ನು ಬಹಳ ಹಚ್ಚಿಕೊಂಡುಬಿಟ್ಟಿದ್ದೆ. ಈಗ ಅದಿಲ್ಲದೆ ನಗ್ನ ಎಂದೆನಿಸುತ್ತದೆ. ನಾನು ನಿಜವಾಗಿಯೂ ಅದನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿದ್ದೇನೆ... ಈ ಹೊಸ ಅವತಾರಕ್ಕೆ ಹೊಂದಿಕೊಳ್ಳಲು ಇನ್ನೂ ಹಲವಾರು ದಿನ ಹಿಡಿಯುತ್ತದೆ" ಎಂದಿದ್ದಾರೆ ನಟ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ